ಮೈಟೆಕ್ ತಾಂತ್ರಿಕ ಶಿಕ್ಷಣ ಸಂಸ್ಥೆ: 2021-22ನೇ ಸಾಲಿನ ತರಬೇತಿಗೆ ಪ್ರವೇಶಾತಿ ಆರಂಭ

ಕಾರ್ಕಳ ಜು.24(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣ ತರಬೇತಿ ನೀಡುವಲ್ಲಿ ಹೆಸರುವಾಸಿಯಾಗಿದೆ ಮೈ-ಟೆಕ್ ಐಟಿಐ ಕಾಲೇಜು.

ಈ ಕಾಲೇಜು ಐಟಿಈಎಸ್ ಮುಂಬೈ ಇದರೊಂದಿಗೆ ಸಂಯೋಜನೆ ಹೊಂದಿದ್ದು, ಭಾರತ ಸರಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಇದರ ಟ್ರೈನಿಂಗ್ ಪ್ರೊವೈಡರ್. 2006 ರಲ್ಲಿ ಆರಂಭಗೊಂಡ ಸಂಸ್ಥೆಯು 15 ವರ್ಷಗಳನ್ನು ಪೂರೈಸಿದ್ದು ಕರ್ನಾಟಕ ಸರಕಾರದ ಒಕೇಷನಲ್ ಟ್ರೈನಿಂಗ್ ಪ್ರೊವೈಡರ್ ಮಾನ್ಯತೆ ಪಡೆದುಕೊಂಡಿದೆ. ಅಲ್ಲದೆ ಐಎಸ್ಒ 9001:2005 ಮಾನ್ಯತೆಯನ್ನೂ ಪಡೆದುಕೊಂಡಿದೆ.

ಇದೀಗ ಮೈ ಟೆಕ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ 2021- 22ನೇ ಸಾಲಿನ ತರಬೇತಿಗೆ ಪ್ರವೇಶಾತಿ ಆರಂಭಗೊಂಡಿದೆ. ಇಲ್ಲಿ ವಿದ್ಯಾರ್ಥಿಗಳಿಗೆ 100 ಶೇ. ಉದ್ಯೋಗ ಭರವಸೆಯೊಂದಿಗೆ ಕಲಿಕೆಗೆ ಅವಕಾಶ ನೀಡಲಾಗುತ್ತದೆ.

ಕಾರ್ಕಳ, ಉಡುಪಿ, ಹಿರಿಯಡಕ, ಶಿರ್ವದಲ್ಲಿ ಈ ತಾಂತ್ರಿಕ ಶಿಕ್ಷಣ ತರಬೇತಿ ಸಂಸ್ಥೆಯ ಕೇಂದ್ರಗಳು ಇದ್ದು, ಈಗಾಗಲೇ ಗುಣಮಟ್ಟದ ಶಿಕ್ಷಣಕ್ಕೆ  ಪ್ರಸಿದ್ಧಿ ಪಡೆದಿದೆ. ಕಾಲೇಜಿನಲ್ಲಿ ಎಲೆಕ್ಟ್ರೀಶಿಯನ್, ರೆಫ್ರಿಜರೇಶನ್, ಆಫೀಸ್ ಮ್ಯಾನೇಜ್‌ಮೆಂಟ್, ನರ್ಸರಿ ಟೀಚರ್ ಟ್ರೈನಿಂಗ್, ಎಂಎಸ್ಓ, ಡಿಸಿಎ, ಟ್ಯಾಲಿ ಜಿಎಸ್‌ಟಿ, ಆಟೋಮೊಬೈಲ್, ಫ್ಯಾಶನ್ ಡಿಸೈನಿಂಗ್ ಕೋರ್ಸ್ ಗಳು ಲಭ್ಯವಿದೆ. ಎಸ್.ಎಸ್.ಎಲ್.ಸಿ, ನೇರ ಪರೀಕ್ಷೆಗೆ, ಪಿಯುಸಿ ನೇರ ಪರೀಕ್ಷೆಗೆ, ಕಂಪ್ಯೂಟರ್ ಕೋರ್ಸ್ ಗಳು ಕೂಡಾ ಲಭ್ಯವಿದೆ. 

ಇಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೋಮಾದಲ್ಲಿ ಉತ್ತೀರ್ಣ/ಅನುತ್ತೀರ್ಣರಾದವರಿಗೂ ಪ್ರವೇಶಾತಿ ಲಭ್ಯವಿದೆ.
2006 ರಲ್ಲಿ ಆರಂಭ ಗೊಂಡ ಸಂಸ್ಥೆ ಯು 15 ವರ್ಷ ಗಳನ್ನು ಪೂರೈಸಿದೆ.‌ ಇದೀಗ ಉಡುಪಿ ಜಿಲ್ಲೆಯ ನಂಬರ್ ಒನ್  ತಾಂತ್ರಿಕ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ಯಾಗಿ ಗುರುತಿಸಿ ಕೊಂಡಿರುವ ಮೈ ಟೆಕ್ ಐಟಿಐ ಕಾಲೇಜಿನ ಗುಣಮಟ್ಟದ ಶಿಕ್ಷಣ ತರಬೇತಿ ನಿಮ್ಮದಾಗಿಸಲು ಆಸಕ್ತ ವಿದ್ಯಾರ್ಥಿಗಳು ಶೀಘ್ರವಾಗಿ ನೋಂದವಣೆ ಮಾಡಿಕೊಂಡು ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುವ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. 

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9591936546, 9591696372, 9945198483, 9535981964 ನ್ನು ಸಂಪರ್ಕಿಸುವಂತೆ ಮೈ-ಟೆಕ್ ಸಂಸ್ಥೆ ತಿಳಿಸಿದೆ.

5 thoughts on “ಮೈಟೆಕ್ ತಾಂತ್ರಿಕ ಶಿಕ್ಷಣ ಸಂಸ್ಥೆ: 2021-22ನೇ ಸಾಲಿನ ತರಬೇತಿಗೆ ಪ್ರವೇಶಾತಿ ಆರಂಭ

Leave a Reply

Your email address will not be published. Required fields are marked *

error: Content is protected !!