ಉಡುಪಿ: 300 ನೋಂದಾಯಿತ ಮನೆ ಕೆಲಸಗಾರರಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕೋವಿಡ್ -19ರ ಸಂಕಷ್ಟದಲ್ಲಿರುವ 300 ನೋಂದಾಯಿತ ಮನೆ ಕೆಲಸಗಾರರಿಗೆ ಆಹಾರ ಸಾಮಗ್ರಿ ಕಿಟ್ ಗಳನ್ನು ಮನೆ ಕೆಲಸಗಾರರ ಸಂಘ ಉಡುಪಿ ಜಿಲ್ಲೆ ಇವರ ಸಹಭಾಗಿತ್ವದಲ್ಲಿ ಸವಿತಾ ಸಮಾಜ ಸಮುದಾಯ ಭವನದಲ್ಲಿ ಇಂದು ವಿತರಣೆ ಕಾರ್ಯಕ್ರಮ ಜರಗಿತು.

ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಕಿಟ್ ಗಳನ್ನು ವಿತರಿಸಿ ಕಾರ್ಮಿಕ ಇಲಾಖೆಯ ಸವಲತ್ತುಗಳ ಮಾಹಿತಿ  ನೀಡುವುದರೊಂದಿಗೆ, ಯಾವುದೇ ದುರ್ಲಾಭ ಪಡೆಯದೇ ನಿಜವಾದ ಫಲಾನುಭವಿಗಳಿಗೆ ಸರಕಾರದ ಇಂತಹ ಸೌಲಭ್ಯ ಮುಂದೆಯೂ ನೀಡುವಂತಾಗಲು ನನ್ನ ಪ್ರಾಮಾಣಿಕ ಸೇವೆ ಇಲಾಖೆಯಲ್ಲಿ ನೀಡುತ್ತೇನೆ ಎಂದರು.

ಮನೆಕೆಲಸದವರ ಜಿಲ್ಲಾ ಸಂಘದ ಅಧ್ಯಕ್ಷರಾದ ಬನ್ನಂಜೆ ಗೋವಿಂದ ಭಂಡಾರಿ ಮಾತಾಡುತ್ತ ಮನೆಕೆಲಸದವರ ಅಗತ್ಯ ಎಲ್ಲರಿಗೂ ಇದೆ ಆದರೆ ಅವರ ಸಂಕಷ್ಟಕ್ಕೆ ಅವರ ಸಮಸ್ಯೆಗೆ ಯಾರೂ ಮುಂದೆ ಬಾರದಿರುವುದನ್ನು ಮನಗಂಡು ಸವಿತಾ ಸಮಾಜ ಸಂಘಟನೆಯಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರೂ ಯಾವುದೇ ಜಾತಿ ಧರ್ಮ ನೋಡದೆ ಬಡ ಮನೆಕೆಲಸ ಕಾರ್ಮಿಕರಿಗೆ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಇತ್ತೀಚಿನ ಮೂರು ವರ್ಷಗಳಿಂದ ಸಂಘಟನೆ ಮಾಡಿ ಮುಂದಿನ ದಿನಗಳಲ್ಲಿ ಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಏನಿವೆ, ಅದನ್ನು ನಮ್ಮ ಮನೆಕೆಲಸ ಕಾರ್ಮಿಕರಿಗೂ ಸಿಗುವ ಹಾಗೆ ನಿರಂತರ ನಾನು  ಪ್ರಯತ್ನಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಸದಾಶಿವ ಬಂಗೇರ ಕುರ್ಕಾಲು ಪ್ರಕಾರ್ಯದರ್ಶಿ ಉಡುಪಿ ಜಿಲ್ಲಾ ಸವಿತಾ ಸಮಾಜ, ನವೀನ್ ಚಂದ್ರ ಭಂಡಾರಿ ಅಧ್ಯಕ್ಷರು, ಮಾಲತಿ ಅಶೋಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಡುಪಿ, ರಾಜು ಭಂಡಾರಿ ಕಿನ್ನಿಮೂಲ್ಕಿ ಅಧ್ಯಕ್ಷರು ಉಡುಪಿ ತಾಲೂಕು ಸವಿತಾ ಸಮಾಜ, ಗಂಗಾಧರ್ ಭಂಡಾರಿ ಬಿರ್ತಿ ಉದ್ಯಮಿ ಹಾಗೂ ಸಮಾಜ ಸೇವಕರು, ಕಾಪು ಸತೀಶ್ ಭಂಡಾರಿ ಸಂಚಾಲಕರು ಉಡುಪಿ ಜಿಲ್ಲಾ ಸವಿತಾ ಸಮಾಜ, ರಾಜಶೇಖರ್ ಬೈಕಾಡಿ       ಉಪಸ್ಥಿತರಿದ್ದರು, ಸತ್ಯವತಿ ಮಜೂರು ಕಾರ್ಯಕ್ರಮ ನಿರೂಪಿಸಿದರು ಶ್ರೀಲತಾ ಕಾಪು ವಂದಿಸಿದರು

Leave a Reply

Your email address will not be published. Required fields are marked *

error: Content is protected !!