ಕಾಂಗ್ರೆಸ್‌ನ ಮೊದಲ ಅಕ್ಷರ ‘ಸಿ’ ಎಂಬುದು ‘ಕನ್ನಿಂಗ್‌’- ಮಾಯಾವತಿ ಗುಡುಗು

ನವದೆಹಲಿ: ಕಾಂಗ್ರೆಸ್‌ನ ಮೊದಲ ಅಕ್ಷರ ‘ಸಿ’ ಎಂಬುದು ‘ಕನ್ನಿಂಗ್‌’ ಎಂಬುದನ್ನು ಸೂಚಿಸುತ್ತದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಗುಡುಗಿದ್ದಾರೆ. ಬಿಎಸ್‌ಪಿಯಲ್ಲಿ ‘ಬಿ’ ಎಂಬುದು ಬಿಜೆಪಿಯನ್ನು ಸೂಚಿಸುತ್ತದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿದ್ದು, ಬಿಜೆಪಿ ವಿರುದ್ಧದ ಒಗ್ಗಟ್ಟು ಪ್ರದರ್ಶಿಸಿದ್ದ ಉಭಯ ಪಕ್ಷಗಳ ನಡುವಣ ಬಿರುಕು ಹೆಚ್ಚಾಗಿದೆ. ಪರಸ್ಪರ ಆರೋಪ-ಪ್ರತ್ಯಾರೋಪಗಳು ಉಲ್ಬಣಗೊಂಡಿವೆ.

‘ಬಿಎಸ್‌ಪಿ ಎಂಬುದು ಬಿಜೆಪಿಯ ವಕ್ತಾರ ಎಂದು ಉತ್ತರ ಪ್ರದೇಶದ ಪ್ರತಿಯೊಬ್ಬ ಮತದಾರರನು ಹೇಳುತ್ತಾನೆ. ಈ ಸತ್ಯವನ್ನು ಮಾಯಾವತಿ ಒಪ್ಪಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ವಕ್ತಾರ ಅಶೋಕ್‌ ಸಿಂಗ್‌ ಇತ್ತೀಚೆಗೆ ಹೇಳಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ, ಬಿಜೆಪಿ ಮೈತ್ರಿಕೂಟದಲ್ಲಿ ಬಿಎಸ್‌ಪಿ ಎಂದಿಗೂ ಸೇರುವುದಿಲ್ಲ. ಎರಡು ಪಕ್ಷಗಳ ಸಿದ್ಧಾಂತಗಳು ವಿರುದ್ಧವಾಗಿವೆ ಎಂದು ಮಾಯಾವತಿ ಹೇಳಿದ್ದರು. ಸಿಎಂ ಮಮತಾರನ್ನು ಕೆಳಗಿಳಿಸಲು ರಾವತ್‌ ರಾಜೀನಾಮೆಯೆಂಬ ಬಿಜೆಪಿಯ ನೈತಿಕ ದಾಳ?

‘ಬಿಎಸ್‌ಪಿಯಲ್ಲಿ ‘ಬಿ’ ಎಂಬುದು ಬಿಜೆಪಿಯನ್ನು ಸೂಚಿಸುತ್ತದೆ ಎಂಬ ಕಾಂಗ್ರೆಸ್‌ನ ಆರೋಪವು ಆಕ್ಷೇಪಾರ್ಹವಾಗಿದೆ. ಬಿ ಎಂಬುದು ‘ಬಹುಜನ’ವನ್ನು ಪ್ರತಿಪಾದಿಸುತ್ತದೆ. ಇದು ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಮತ್ತಿತರ ಅಲ್ಪಸಂಖ್ಯಾತರನ್ನು ಒಗ್ಗೂಡಿಸುತ್ತದೆ. ಅವರ ಸಂಖ್ಯೆ ಹೆಚ್ಚಿದೆ. ಅವರನ್ನು ಬಹುಜನ ಎನ್ನಲಾಗುತ್ತದೆ’ ಎಂದು ಮಾಯಾವತಿ ಸರಣಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌, ಬಿಜೆಪಿ ಅಥವಾ ಸಮಾಜವಾದಿ ಪಕ್ಷವು ಅಧಿಕಾರದಲ್ಲಿದ್ದಷ್ಟು ಸಮಯ ರಾಜ್ಯದಲ್ಲಿ ನಿಷ್ಪಕ್ಷಪಾತ ಚುನಾವಣೆ ಸಾಧ್ಯವಿಲ್ಲ. ಬಿಎಸ್‌ಪಿ ಅಧಿಕಾರದಲ್ಲಿದ್ದಾಗ ದೊಡ್ಡದಿರಲಿ, ಚಿಕ್ಕದಿರಲಿ, ಎಲ್ಲ ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆದಿವೆ ಎಂದು ಮಾಯಾವತಿ ತಿಳಿಸಿದ್ದಾರೆ”

Leave a Reply

Your email address will not be published. Required fields are marked *

error: Content is protected !!