ದುಬೈ: ಕೇರಳದ ಟ್ಯಾಕ್ಸಿ ಚಾಲಕನಿಗೆ 40 ಕೋಟಿ ರೂ. ಬಹುಮಾನ

ದುಬೈ ಜು.4: ಕೇರಳದ ವ್ಯಕ್ತಿಯೊಬ್ಬರು ಯುಎಇನಲ್ಲಿ ನಡೆದ ರಾಫ‌ಲ್‌ ಡ್ರಾದಲ್ಲಿ 40 ಕೋಟಿ ರೂ. ಬಹುಮಾನವನ್ನು ಗೆದ್ದು ಕೊಂಡಿದ್ದಾರೆ. ಅಬುಧಾಬಿಯಲ್ಲಿ ಟ್ಯಾಕ್ಸಿ ಚಾಲಕನಾಗಿರುವ  ಕೇರಳದ ರಂಜಿತ್‌ ಸೋಮರಾಜನ್‌ ಮತ್ತು ಇತರ 9 ಮಂದಿ 40 ಕೋಟಿ ರೂ. ಬಹುಮಾನ ಗೆದ್ದುಕೊಂಡಿದ್ದಾರೆ.

ಮೂರು ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ ರಂಜಿತ್ ಅವರಿಗೆ ಈ ಬಾರಿ ಅದೃಷ್ಟ ಖುಲಾಯಿಸಿದೆ. ಇದೀಗ 40 ಕೋಟಿ ರೂ. ಗೆದ್ದುಕೊಂಡಿರುವ ಬಗ್ಗೆ ಮಾತನಾಡಿದ ಅವರು, ನನಗೆ ಈ ಬಹುಮಾನ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!