ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌: ವಿವಿಧ ಕೋರ್ಸ್ ಗಳ ದಾಖಲಾತಿ ಆರಂಭ

 ಉಡುಪಿ ಜೂ.29: ಉಡುಪಿಯ ಪ್ರಸಿದ್ಧ ಪ್ರಸಾದ್ ನೇತ್ರಾಲಯದ ಅಂಗಸಂಸ್ಥೆಯಾದ ‘ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌’ ನಲ್ಲಿ ವಿವಿಧ ಕೋರ್ಸ್ ಗಳ ದಾಖಲಾತಿ ಆರಂಭಗೊಂಡಿದೆ. 

ಈ ಬಗ್ಗೆ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಸಂಸ್ಥೆಯು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಪ್ಯಾರಾಮೆಡಿಕಲ್ ಬೋರ್ಡ್ ನಿಂದ ಮಾನ್ಯತೆ ಪಡೆದಿದ್ದು, ಈ ಕಾಲೇಜು ನುರಿತ ಶಿಕ್ಷಕ ವೃಂದದೊಂದಿಗೆ ಕಲಿಕಾ ಸೌಲಭ್ಯ ಹೊಂದಿದೆ. 

ಇದೀಗ ಮುಂದಿನ ಸಾಲಿನ ಬಿಎಸ್ಸಿಅಪ್ಟೊಮೆಟ್ರಿ, ಆಪರೇಶನ್ ಥಿಯೇಟರ್ ಕೋರ್ಸ್, ಲ್ಯಾಬ್ ಟೆಕ್ನಿಶಿಯನ್ ಕೋರ್ಸ್, ಪಬ್ಲಿಕ್ ಹೆಲ್ತ್ ಕೋರ್ಸ್, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಕೋರ್ಸ್ ಮತ್ತು ಡಿಪ್ಲೊಮಾ ಕೋರ್ಸ್ ವಿಭಾಗದಲ್ಲಿ ಆಪ್ತಲ್ಮಿಕ್ ಟೆಕ್ನಾಲಜಿ ಕೋರ್ಸ್, ಲ್ಯಾಬ್ ಟೆಕ್ನಿಶಿಯನ್, ಆಪರೇಷನ್ ಥಿಯೇಟರ್ ಕೋರ್ಸ್, ಡಯಾ ಲಿಸಿಸ್ ಟೆಕ್ನಿಶಿಯನ್, ಮೆಡಿಕಲ್ ಇಮೇಜಿಂಗ್ ಟೆಕ್ನಿಶಿಯನ್, ಮೆಡಿಕಲ್ ರೆಕಾರ್ಡ್ ಟೆಕ್ನಿಶಿಯನ್, ಹೆಲ್ತ್ ಇನ್‌ಸ್ಪೆಕ್ಟರ್ ಪ್ಯಾರಾಮೆಡಿಕಲ್ ಕೋರ್ಸ್ ಗಳ ದಾಖಲಾತಿ ಆರಂಭಗೊಂಡಿದೆ.

ಈ ಎಲ್ಲ ಕೋರ್ಸ್‌ಗಳು 3 ವರ್ಷಗಳ ಅವಧಿಯ ಕೋರ್ಸ್ ಗಳಾಗಿದ್ದು, ಡಿಪ್ಲೊಮಾ ಕೋರ್ಸ್‌ಗೆ ದಾಖಲಾತಿ ಪಡೆಯಲು ಕನಿಷ್ಠ ಪಿಯುಸಿ (ಪಿಸಿಬಿ) ವಿದ್ಯಾರ್ಹತೆ ಹೊಂದಿರಬೇಕಾಗುತ್ತದೆ. ಇನ್ನು ಸಂಸ್ಥೆಯ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಇಂಟರ್ ವ್ಯೂ , ಹಾಸ್ಟೆಲ್ ಸೌಲಭ್ಯ, ಉಚಿತ ಕಾಲೇಜು ಬಸ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಾಕ್ಟಿಕಲ್ ತರಬೇತಿ, ಸ್ಕಾಲರ್ ಶಿಪ್, ಸುಸಜ್ಜಿತ ಪ್ರಯೋಗಾಲಯಗಳ ಸೌಲಭ್ಯನೂ ಇದೆ.

ಸೇರ್ಪಡೆ ಬಯಸುವ ವಿದ್ಯಾರ್ಥಿಗಳು ಉಡುಪಿ ಅಲಂಕಾರ್ ಟಾಕೀಸ್ ಹಿಂಬದಿಯ ಎ.ಜೆ. ಅಲ್ಸೆ ರಸ್ತೆಯಲ್ಲಿರುವ ಪ್ರಸಾದ್ ನೇತ್ರಾಲಯದ ನೇತ್ರಜ್ಯೋತಿ ಇನ್ ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಸಂಸ್ಥೆಯನ್ನು ಸಂಪರ್ಕಿಸಬಹು ಎಂದು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!