ಏಳು ತಿಂಗಳ ಪ್ರತಿಭಟನೆ ಅಂತ್ಯಗೊಳಿಸಿ, ಮಾತುಕತೆಗೆ ಸಿದ್ಧ: ರೈತರಿಗೆ ಕೇಂದ್ರ ಕೃಷಿ ಸಚಿವ

ನವದೆಹಲಿ: ಕೇಂದ್ರ ಸರ್ಕಾರದ 3 ಹೊಸ ಕೃಷಿ ಕಾಯ್ದೆಗಳು 8 ನೇ ತಿಂಗಳಿಗೆ ಕಾಲಿಟ್ಟಿತ್ತು, ರೈತರಿಗೆ ತಮ್ಮ 7 ತಿಂಗಳ ಪ್ರತಿಭಟನೆ ಯನ್ನು ಅಂತ್ಯಗೊಳಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. 

ರೈತರ ಪ್ರತಿಭಟನೆ ಪ್ರಾರಂಭವಾದ ನಂತರ ಈ ವರೆಗೂ ಕೇಂದ್ರ ಹಾಗೂ ರೈತ ಸಂಘಟನೆಗಳೊಂದಿಗೆ 11 ಸುತ್ತಿನ ಮಾತುಕತೆ ನಡೆದಿದ್ದು, 2021 ರ ಜ.26 ರಂದು ರೈತರು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದಿದ್ದ ಘರ್ಷಣೆಯ ನಂತರ ಮಾತುಕತೆ ನಡೆದಿಲ್ಲ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶದಿಂದ ಸಾವಿರಾರು ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಾಯ್ದೆಗಳ ಜಾರಿಯನ್ನು ತಡೆದು ಕಾನೂನು ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಮಿತಿ ರಚಿಸಿತ್ತು. ಸಮಿತಿ ವರದಿಯನ್ನು ಸಲ್ಲಿಸಿದೆ. 

“ದೇಶಾದ್ಯಂತ ಹಲವು ಕೃಷಿ ಕಾನೂನುಗಳ ಪರವಾಗಿದ್ದಾರೆ, ಆದರೂ ಕೆಲವು ರೈತರಿಗೆ ಈ ಕಾನೂನಿಗೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ಆ ರೈತರನ್ನು ಆಲಿಸುವುದಕ್ಕೆ ಚರ್ಚೆ ಮಾಡುವುದಕ್ಕೆ ಸರ್ಕಾರ ಸಿದ್ಧವಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿಸುತ್ತಿದ್ದೇನೆ ಎಂದು ತೋಮರ್ ಟ್ವೀಟ್ ಮಾಡಿದ್ದಾರೆ. ಸರ್ಕಾರ ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ಯನ್ನು ಹೆಚ್ಚಿಸಿದ್ದು, ಎಂಎಸ್ ಪಿ ಆಧಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳನ್ನು ಸಂಗ್ರಹಿಸುತ್ತಿದೆ. 

ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಎಂಎಸ್ ಪಿ ಗೆ ಲಿಖಿತ ಭರವಸೆ ನೀಡಲು ಆಗ್ರಹಿಸಿ ರೈತರು 2020 ರ ನವೆಂಬರ್ 26 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 

Leave a Reply

Your email address will not be published. Required fields are marked *

error: Content is protected !!