‘ವಿಶ್ವ ಗುರು’ ಭಾರತ ಮೋದಿಯಿಂದಾಗಿ ‘ವಿಶ್ವ ಬಿಕಾರಿ’ಯಾಗುತ್ತಿದೆ- ಕಾಂಗ್ರೆಸ್​ ವ್ಯಂಗ್ಯ

ನವದೆಹಲಿ: ಭಾರತವನ್ನು ವಿಶ್ವಗುರು ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ ವ್ಯಂಗ್ಯವಾಡಿದೆ. 

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಪಂಜಾಬ್​​ ಕಾಂಗ್ರೆಸ್​ ಅಧ್ಯಕ್ಷ ಸುನೀಲ್​ ಜಂಕರ್​​, ಯುಎಸ್​ಡಿ 5 ಟ್ರಿಲಿಯನ್​ ಆರ್ಥಿಯತೆಯನ್ನು ಸೃಷ್ಟಿಸಿ, ವಿಶ್ವಕ್ಕೆ ಭಾರತ ಗುರುವಾಗಲಿದೆ ಎಂದು ಮೋದಿ ಹೇಳಿದ್ದರು. ಆದರೆ ಈಗ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳಿಂದ ಭಾರತ ಸಹಾಯ ಪಡೆಯುತ್ತಿದೆ. ಭಾರತವನ್ನು ಪ್ರಧಾನಿ ಮೋದಿ ವಿಶ್ವ ಬಿಕಾರಿಯನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಕೊರೊನಾ 2ನೇ ಅಲೆ ವೇಳೆ ಮೋದಿ ಅವರ ನಿರ್ವಹಣೆ ಕಳಪೆಯಾಗಿತ್ತು. ಹೇಗೆ ನಿರ್ವಹಣೆ ಮಾಡಬಾರದು ಎಂಬುವುದಕ್ಕೆ ಮೋದಿ ಆಡಳಿತ ಮಾದರಿಯಾಗಿದೆ. 5 ಟ್ರಿಲಿಯನ್​ ಆರ್ಥಿಕತೆ ಮೂಲಕ ಭಾರತ ವಿಶ್ವಗುರು ಎನಿಸಿಕೊಳ್ಳುತ್ತೆ ಎಂದು ಬಡಾಯಿ ಕೊಚ್ಚಿ ಕೊಂಡಿದ್ದರು. ಆದರೆ ಈಗ ನಿತ್ಯ ಆಕ್ಸಿಜನ್​ ಹೊತ್ತ ವಿಮಾನಗಳು ವಿದೇಶದಿಂದ ಬರುತ್ತಿವೆ. ಪ್ರಪಂಚದ ಎದುರು ಭಾರತ ಆಕ್ಸಿಜನ್​ಗಾಗಿ ಕೈಚಾಚಿ ಕೂತಿದೆ. ಭಾರತವನ್ನು ಪ್ರಧಾನಿ ಮೋದಿ ವಿಶ್ವಬಿಕಾರಿಯನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!