ಲಸಿಕಾ ಕೇಂದ್ರಗಳು ಸಾರ್ವತ್ರಿಕವಾಗಿರಬೇಕು: ಅನ್ವರ್ ಅಲಿ ಕಾಪು

ಕಾಪು: ಕೊರೋನ ನಿರ್ಮೂಲನ ಅಭಿಯಾನದ ಅಂಗವಾಗಿ ಸರಕಾರವು ದೇಶದ ಮೂಲೆ ಮೂಲೆಗಳಿಗೆ ಲಸಿಕೆಯನ್ನು ವಿತರಿಸಿ, ಜನರು ಅದರ ಪ್ರಯೋಜನ ಪಡೆಯಬೇಕೆಂದು ವ್ಯವಸ್ಥೆ ಮಾಡಿದೆ. ಆದರೆ ಇಂದು ಕೆಲವು ಕಡೆ ಲಸಿಕೆ ವಿತರಿಸಲ್ಪಡುವ ಕೇಂದ್ರಗಳು ತಮ್ಮ ಪ್ರಾಂತಿಯಕ್ಕೆ ಪ್ರಾತಿನಿಧ್ಯ ನೀಡುತ್ತಾ ಇತರ ಸುತ್ತ ಮುತ್ತಲಿನ ಪ್ರದೇಶದಿಂದ ಬಂದವರಿಗೆ ವಾಪಸು ಕಳುಹಿಸುತ್ತಾರೆ. ಈ ಕ್ರಮ ಸರಿಯಲ್ಲ. ಟೋಕನ್ ನೀಡುವ ಸಂದರ್ಭದಲ್ಲಿ ಆ ಕೇಂದ್ರಕ್ಕೆ ಯಾರು ಬಂದು ಸರತಿ ಸಾಲಿನಲ್ಲಿ ನಿಂತರೆ ಅವರನ್ನು ತಡೆಯಬಾರದು.

ಇದು ಸಾರ್ವತ್ರಿಕ ಕೇಂದ್ರ ಎಂದು ವೈದ್ಯಾಧಿಕಾರಿಗಳು ಮನನ ಮಾಡಿ ಕೊಡಬೇಕೆಂದು ಮಾಜಿ ತ್ರಿಜಿಲ್ಲಾ ಕರಾವಳಿ ವಲಯ ಸಂಚಾಲಕರಾದ ಅನ್ವರ್ ಅಲಿ ಕಾಪು ಹೇಳಿದರು. ಅವರು ಹುಮ್ಯಾನಿಟಿರೇನಿಯಮ್ ರಿಲೀಫ್ ಸೊಸೈಟಿ ಕಾಪು ತಾಲೂಕು ವತಿಯಿಂದ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸ್ಯಾನಿಟೈಸರ್ ನ ಕಿಟ್ ಅಲ್ಲಿಯ ವೈದ್ಯಾಧಿಕಾರಿ ಸುಬ್ರಾಯ ಕಾಮತ್ ರಿಗೆ ಹಸ್ತಾಂತರಿಸಿ ಮಾತನಾಡಿದರು. ಹೆಚ್.ಆರ್.ಎಸ್ ನ ಸೇವೆಯನ್ನು ನಾನು ಗಮನಿಸಿದ್ದು ಇದೊಂದು ಸರ್ವ ದರ್ಮಿಯರಿಗೂ ಸೇವೆ ಸಲ್ಲಿಸುವ ಸಂಸ್ಥೆ ಆಗಿರುತ್ತದೆ. ಇವರ ಸೇವೆ ನಿರಂತರವಾಗಿರಲಿ ಮತ್ತು ಲಸಿಕಾ ಕೇಂದ್ರದಲ್ಲಿ ಯಾವುದೇ ತಾರತಮ್ಯ ಆಗದ ವಾತಾವರಣ ನಾವು ಕಲ್ಪಿಸುತ್ತೇವೆ ಎಂದು ವೈದ್ಯಾಧಿಕಾರಿ ಸುಬ್ರಾಯ ಕಾಮತ್ ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಅರೋಗ್ಯ ಸಹಾಯಕರಾದ ಹೇಮಂತ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬಂದಿಗಳು, ಎಚ್.ಆರ್.ಎಸ್ ನ ಅನೀಸ್ ಅಲಿ, ಸಾಹಿಲ್, ಸಕ್ಲೇನ್ ಪಾಷ, ಅಬ್ದುಲ್ ಅಹದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!