ಮಂಗಳೂರು: ಕಸ್ಟಮರ್ ಕೇರ್ ಹೆಸರಿನಲ್ಲಿ ಮೊಬೈಲ್ ಸಿಮ್ ದಾಖಲೆ ಪಡೆದು 1.27ಲಕ್ಷ ರೂ.ವಂಚನೆ
ಮಂಗಳೂರು ಜೂ.11: ಕಸ್ಟಮರ್ ಕೇರ್ ಹೆಸರಿನಲ್ಲಿ ಮೊಬೈಲ್ ಸಿಮ್ ದಾಖಲೆ ಪಡೆದು 1.27 ಲಕ್ಷ ರೂ. ವಂಚಿಸಿರುವ ಘಟನೆ ದ.ಕ ಜಿಲ್ಲೆಯಲ್ಲಿ ನಡೆದಿದೆ.
ಕಸ್ಟಮರ್ ಕೇರ್ ನಿಂದ ಕರೆ ಮಾಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಆಗಂತುಕ, ವ್ಯಕ್ತಿಯ ಮೊಬೈಲ್ ಸಿಮ್ ನವೀಕರಣ ದಾಖಲೆ ಕೇಳುವ ನೆಪದಲ್ಲಿ ರೀಚಾರ್ಜ್ ಮಾಡಲು ವ್ಯಕ್ತಿ ಖಾತೆ ಹೊಂದಿರುವ ಬ್ಯಾಂಕ್ನ ನೆಟ್ ಬ್ಯಾಂಕಿಂಗ್ ಆ್ಯಪ್ ಡೌನ್ಲೋಡ್ ಮಾಡಲು ಸೂಚಿಸಿದ್ದಾನೆ. ತಮಗೆ ಕರೆ ಮಾಡಿದ್ದು ಕಸ್ಟಮರ್ ಕೇರ್ ನವರೇ ಎಂದು ನಂಬಿದ ವ್ಯಕ್ತಿ ಆ್ಯಪ್ ಡೌನ್ ಲೋಡ್ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂ. 1,27,017 ರೂ.ವನ್ನು ಅನಧಿಕೃತ ವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿ ಮೋಸ ಮಾಡಿದ್ದಾನೆ ಎಂದು ವ್ಯಕ್ತಿ ನಗರ ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.