ಶಾಲಾ-ಕಾಲೇಜುಗಳ ಶುಲ್ಕ ಪಾವತಿಗೆ ಒತ್ತಡ ಹೇರಿದರೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಎಚ್ಚರಿಕೆ

ಮಂಗಳೂರು, ಜೂ.11: ಶಾಲಾ-ಕಾಲೇಜುಗಳ ಶುಲ್ಕ ಪಾವತಿಗೆ ಒತ್ತಡ ಹೇರದಂತೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸೂಚನೆ‌ ನೀಡಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕೆಲವು ಶಾಲಾ, ಕಾಲೇಜಿನ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಯವರು ವಿದ್ಯಾರ್ಥಿಗಳ ಹೆತ್ತವರ ಬಳಿ ಕಳೆದ ಶೈಕ್ಷಣಿಕ ವರ್ಷದ ಬಾಕಿ ಶುಲ್ಕವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ದೂರವಾಣಿ ಕರೆ ಮಾಡಿ ಒತ್ತಾಯಿಸುವುದು, ಪಾವತಿಸದಿದ್ದರೆ ಆನ್‌ಲೈನ್ ಪಾಠ ತಡೆಹಿಡಿಯಲಾಗುವುದು ಎಂದು ಎಚ್ಚರಿ ಸುತ್ತಿರುವುದು ಕೇಳಿಬರುತ್ತಿದೆ.

ಮಾತ್ರವಲ್ಲದೆ ವರ್ಗಾವಣೆ ಪತ್ರ ಕೊಡುವುದಿಲ್ಲ, ಲೇಖನ ಸಾಮಗ್ರಿಗಳನ್ನು ನಿರ್ದಿಷ್ಟ ಅಂಗಡಿಗಳಲ್ಲಿ ಮಾತ್ರ ಪಡೆಯಬೇಕು ಎಂದು ಒತ್ತಡ ಹಾಕುವ ದೂರುಗಳು ಬಂದಿದ್ದು,ಇನ್ನು ಮುಂದೆ ಯಾವಕಾರಣಕ್ಕೂ ವಿದ್ಯಾರ್ಥಿಗಳ ಹೆತ್ತವರು, ಪೋಷಕರಲ್ಲಿ ಶುಲ್ಕ ಪಾವತಿಗಾಗಿ ಶಿಕ್ಷಣ ಸಂಸ್ಥೆಗಳು ಒತ್ತಡ ಹಾಕಬಾರದು.

ಒಂದು ವೇಳೆ ಒತ್ತಡ ಹಾಕಿದ ಬಗ್ಗೆ ದೂರುಗಳು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

1 thought on “ಶಾಲಾ-ಕಾಲೇಜುಗಳ ಶುಲ್ಕ ಪಾವತಿಗೆ ಒತ್ತಡ ಹೇರಿದರೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಎಚ್ಚರಿಕೆ

  1. Sir I’m a final year B.com student of karavali College Mangalore staying in college hostel
    I have cleared my 100% College Fees nd 80% hostel fees now their telling that cleared All fees. due to corona virus in last 1 year no work for my father we r really afraid about Fees. their not Adjusting Hostel fees now not staying in Hostel Last yr also I’m not there in hostel but their collecting full fees of hostel. not me only sir many of over college students had same reason please do something sir it’s over last stage of education nd please secret about my name nd email address sir

Leave a Reply

Your email address will not be published. Required fields are marked *

error: Content is protected !!