ರಿಯಾದ್: ಮೂಡುಬಿದ್ರೆ ದಂಪತಿಯ ಕಾರು ಅಪಘಾತ- ಒಂದು ವರ್ಷದ ಮಗು ಮೃತ್ಯು

ಮೂಡುಬಿದಿರೆ: ಕಲ್ಲಬೆಟ್ಟು ಮೂಲದ ದಂಪತಿಯ ಮಗು ರಿಯಾದ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಟ್ರಾವೆಲ್ ಏಜೆನ್ಸಿ ಮಾಲಕ ಆದಿಲ್ ದಂಪತಿ ರಿಯಾದ್ ನಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು.

ಆದಿಲ್ ಕುಟುಂಬ .ದಮ್ಮಾಮ್ ನಿಂದ ರಿಯಾದ್ ಗೆ ವಾಪಾಸಾಗುತ್ತಿದ್ದಾಗ ಆದಿಲ್ ಚಲಾಯಿಸುತ್ತಿದ್ದ ಕಾರು ಪಲ್ಟಿಯಾಗಿದೆಂದು ತಿಳಿದು ಬಂದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಒಂದು ವರ್ಷದ ಗಂಡು ಮಗು ಓವೈಸಿ ಆದಿಲ್ ಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ರಿಯಾಜ್ ನ ನ್ಯಾಶನಲ್ ಗಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಇನ್ನು ಮೃತಪಟ್ಟಿರುವ ಮಗುವಿನ ಅಂತ್ಯಕ್ರಿಯೆ ರಿಯಾದ್ ನಲ್ಲೇ ನಡೆಸಲಾಗಿದೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!