ಯುಎಇ: ಜೂ.14 ವರೆಗೆ ಭಾರತದಿಂದ ಪ್ರಯಾಣಿಸುವ ವಿಮಾನ ನಿಷೇಧ

ಅಬುದಾಬಿ ಮೇ.23: ಭಾರತದಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಎಇಗೆ ಭಾರತದಿಂದ   ಪ್ರಯಾಣಿಸುವ ವಿಮಾನ ಪ್ರಯಾಣಕ್ಕೆ ತಾತ್ಕಾಲಿಕವಾಗಿ ಹೇರಲಾಗಿದ್ದ ನಿಷೇಧದ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

 ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಯುಎಇ ಯ ನಾಗರಿಕ ವಿಮಾನಯಾನ ಇಲಾಖೆ ಈ ಮೊದಲು ಅನಿರ್ಧಿಷ್ಠಾವಧಿಗೆ ವಿಮಾನ ಪ್ರಯಾಣದ ಮೇಲಿನ ನಿಷೇಧ ಹೇರಿ, ಆದೇಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ಜೂನ್ 14  ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಇದರೊಂದಿಗೆ ಕಳೆದ ಹದಿನಾಲ್ಕು ದಿನಗಳೊಳಗೆ ಭಾರತದಲ್ಲಿ ತಂಗಿದವರಿಗೂ, ಹದಿನಾಲ್ಕು ದಿನಗಳೊಳಗೆ ಭಾರತದ ಮೂಲಕ ಯುಎಇ ಪ್ರವೇಶಿಸುವ ಇತರ ದೇಶದವರಿಗೂ ಯುಎಇ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಆದರೆ, ರಾಜತಾಂತ್ರಿಕರಿಗೆ ಯುಎಇ ಪ್ರಜೆಗಳಿಗೆ ಮತ್ತು ಗೋಲ್ಡನ್ ವೀಸಾ ಹೊಂದಿರುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಂಥವರು ಚಾರ್ಟರ್ಡ್ ವಿಮಾನ ಅಥವಾ ಖಾಸಗೀ ವಿಮಾನಗಳ ಮೂಲಕ ಯುಎಇ ಪ್ರವೇಶಿಸಬಹುದಾಗಿದೆ. ಇಂಥವರು ಪ್ರಯಾಣಕ್ಕೆ ಸಂಬಂಧಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!