ರಾಜ್ಯದಲ್ಲಿ 18ರಿಂದ 44 ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

ಬೆಂಗಳೂರು: 18ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ಹಾಕುವ ಅಭಿಯಾನವನ್ನು ಮೇ 14ರಿಂದ ತಾತ್ಕಾಲಿಕವಾಗಿ ರಾಜ್ಯ ಸರ್ಕಾರ ಸ್ಥಗಿತಗೊಳಿಸಲಿದೆ. ಎಲ್ಲ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಈ ಆದೇಶ ಅನ್ವಯ ಆಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈಗಾಗಲೇ ಕೇಂದ್ರ ಸರ್ಕಾರ ನೀಡಿದ ಮತ್ತು ರಾಜ್ಯ ಸರ್ಕಾರ ನೇರವಾಗಿ ಖರೀದಿಸಿದ ಲಸಿಕೆ ದಾಸ್ತಾನನ್ನು 45 ವರ್ಷ ದಾಟಿದವರಿಗೆ ಎರಡನೇ ಡೋಸ್‌ ನೀಡಲು ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಇಲಾಖೆ ಹೇಳಿದೆ.

2ನೇ ಡೋಸ್ ಪೂರೈಕೆಯಾದ ಬಳಿಕವಷ್ಟೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆಯ ದಿನಾಂಕವನ್ನು ಘೋಷಿಸಲಾಗುವುದೆಂದು ಸರಕಾರ ಹೇಳಿದೆ. ಇದರಿಂದಾಗಿ ಯುವಜನತೆಗೆ ಲಸಿಕೆ ಪೂರೈಕೆಗೆ ವ್ಯತ್ಯಯ ಉಂಟಾಗಿದೆ.

ಇದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರವು ಸಹ ಕೋವಿಡ್ ಲಸಿಕೆಯ ಕೊರತೆ ಹಿನ್ನೆಲೆಯಲ್ಲಿ 18–44 ವರ್ಷ ವಯೋಮಿತಿಯ ನಾಗರಿಕರಿಗೆ ಕೋವಿಡ್ ಲಸಿಕೆ ನೀಡಿಕೆಯನ್ನು ಸ್ಥಗಿತ ಮಾಡಿತ್ತು. ಅಲ್ಲಿಯೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!