18-45 ವಯೋಮಾನದವರಿಗೆ ಪ್ರಚಾರಕ್ಕಾಗಿ ಲಸಿಕೆ ಪ್ರಾರಂಭ: ಉಡುಪಿ ಬ್ಲಾಕ್ ಕಾಂಗ್ರೆಸ್

ಉಡುಪಿ: ಮೇ 1 ರಿಂದ 18-45 ವಯೋಮಾನದವರಿಗೆ ಕೋವಿಡ್ 19 ನಿಂದ ರಕ್ಷಿಸಲು ದೇಹದಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ವ್ಯಾಕ್ಸಿನ್ ನೀಡುವ ಪ್ರಕ್ರಿಯೆಗಳು ಯಾವುದೇ ಪೂರ್ವ ತಯಾರಿ ಇಲ್ಲದೆ ಪ್ರಚಾರಕ್ಕಾಗಿ ಭರ್ಜರಿ ಪ್ರಚಾರದಿಂದ ಸಾಂಕೇತಿಕವಾಗಿ ಪ್ರಾರಂಭವಾಗಿ ಮರುದಿನ ನಾಪತ್ತೆಯಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಆರೋಗ್ಯ ಇಲಾಖೆಗಳು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ವ್ಯಾಕ್ಸಿನ್‌ಗಳನ್ನು ತಯಾರಿಸಿ, ಸಾಕಷ್ಟು ದಾಸ್ತಾನು ಇಟ್ಟುಕೊಂಡು ಅಗತ್ಯ ಇರುವಲ್ಲಿ ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಒಂದನೇ ಡೋಸ್ ಪಡೆದು 6-8 ವಾರಗಳಾದರೂ ಎರಡನೇ ಡೋಸ್ ವ್ಯಾಕ್ಸಿನ್‌ಗೆ ಜನ ಪರದಾಡುವಂತಾಗಿದೆ. ವ್ಯಾಕ್ಸಿನ್ ಎಲ್ಲಿ ದೊರೆಯುತ್ತದೆ ಎಂದು ಮಾಹಿತಿ ಇಲ್ಲದ ಜನ ಆಸ್ಪತ್ರೆಗಳಿಗೆ ಸುತ್ತಾಡುವಂತಾಗಿದೆ.

2019-2020ರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡು ವ್ಯಾಪಕವಾಗಿ ಜನ ಸೋಂಕು ಪೀಡಿತರಾಗಿ ಸಾಕಷ್ಟು ಸಾವು ನೋವು, ಆರ್ಥಿಕ ಸಂಕಷ್ಟ ಎದುರಾದರೂ 2ನೇ ಅಲೆ ಎದುರಿಸಲು ಪೂರ್ವ ಸಿದ್ಧತೆಯಲ್ಲಿ ಸರಕಾರಗಳು ಮುಗ್ಗರಿಸಿವೆ. ಸರಕಾರದ ಮೇಲೆ ವಿಶ್ವಾಸವಿರಿಸಿದ ಜನತೆ ಈಗ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿನ ತೀರ್ಪಿಗೆ ಕಾಯುವಂತಾಗಿದೆ.

ಉಡುಪಿಯ ಶಾಸಕರು ಹಾಗೂ ಸಂಸದರು ತಮ್ಮದೇ ಪಕ್ಷದ ಆಡಳಿತವಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವರಿಷ್ಠರಿಗೆ ಒತ್ತಡ ಹಾಕಿ ಸಾಕಷ್ಟು ವ್ಯಾಕ್ಸಿನ್ ಉಡುಪಿಗೆ ಲಭಿಸುವಂತೆ ಮಾಡಿ ಯುವ ಜನತೆಯ ಜೀವ ಉಳಿಸುವಂತೆ ಅಲ್ಲದೆ ವ್ಯಾಕ್ಸಿನ್ ಅನ್ನು ಸರಕಾರಿ ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲದೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ನೀಡುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಮಾಜಿ ನಗರಸಭಾ ಸದಸ್ಯರುಗಳಾದ ಶಶಿರಾಜ್ ಕುಂದರ್, ಸುಕೇಶ್ ಕುಂದರ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!