ಕೇಂದ್ರವನ್ನು ಪ್ರಶ್ನಿಸಲಾಗದ ರಾಜ್ಯದ ಬಿಜೆಪಿಯ 25 ಸಂಸದರು ತಮ್ಮ ಬೆನ್ನು ಮೂಳೆ ಕಳೆದುಕೊಂಡಿದ್ದಾರೆಯೇ: ಸಿದ್ದರಾಮಯ್ಯ

ಬೆಂಗಳೂರು: ಕೋವಿಡ್ ನಿರ್ವಹಣೆ ವಿಚಾರವಾಗಿ ಮತ್ತೆ ಕರ್ನಾಟಕ ಬಿಜೆಪಿಯನ್ನು ಟೀಕಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರವನ್ನು ಪ್ರಶ್ನಿಸಲಾಗದೇ ಅಡಗಿಕುಳಿತಿರುವ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು ಎಂದು ಹೇಳಿದ್ದಾರೆ.

ಹೈಕೋರ್ಟ್​ ಸೂಚನೆ ವಿರುದ್ಧ ಕೇಂದ್ರ ಸರ್ಕಾರ ಇದೀಗ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ನಡೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್​ ಮೂಲಕ ಖಂಡಿಸಿದ್ದಾರೆ’.

ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರು ತಮ್ಮ ಬೆನ್ನು ಮೂಳೆ ಕಳೆದುಕೊಂಡಿದ್ದಾರೆಯೇ ಎಂದಿದ್ದಾರೆ. ಕರ್ನಾಟಕಕ್ಕೆ 1600-1700 ಮೆ.ಟನ್ ಗಿಂತ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಕೇವಲ 675 ಮೆ.ಟನ್ ಆಮ್ಲಜನಕವನ್ನು ಹಂಚಿಕೆ  ಮಾಡಿದೆ, ಇದು ಬೇಡಿಕೆಯ ಶೇ.60 ಕ್ಕಿಂತ ಕಡಿಮೆ. ಇದೆ. ಆದರೆ ಹೈಕೋರ್ಟ್ ಕರ್ನಾಟಕದ ಪರ ನೀಡಿರುವ ನಿರ್ದೇಶನವನ್ನು ವಿರೋಧಿಸಿ ಕೇಂದ್ರ ಸರ್ಕಾರ ಸುಪ್ರೀ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಕರ್ನಾಟಕ ಸರ್ಕಾರವಾಗಲೀ ಅಥವಾ ಸಿಎಂ ಯಡಿಯೂರಪ್ಪ ಹೋರಾಟ  ಮಾಡಲಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದಿಂದ ಬಿಜೆಪಿಯ 25 ಮಂದಿ ಸಂಸದರು ಆಯ್ಕೆಯಾಗಿದ್ದಾರೆ. ಈ ಎಲ್ಲ 25 ಮಂದಿ ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಮಾತನಾಡುವ ಧೈರ್ಯವನ್ನೇ ಈ ಸಂಸದರು ಕಳೆದುಕೊಂಡಿದ್ದಾರೆ. ನಾಚಿಕೆಯಾಗಬೇಕು ಅವರಿಗೆ.. ಅವರಾರೂ ಕರ್ನಾಟಕವನ್ನು  ಪ್ರತಿನಿಧಿಸಲು ಯೋಗ್ಯರೇ ಅಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

error: Content is protected !!