ಎರಡರ ಮಗ್ಗಿ ಬಾರದ ವರನನ್ನ ಮಂಟಪದಲ್ಲೇ ತಿರಸ್ಕರಿಸಿದ ವಧು!

ಲಖನೌ ಮೇ.5: ಕೆಲವೊಂದು ಮದುವೆಗಳು ಕಲ್ಯಾಣ ಮಂಟಪದವರೆಗೆ ಬಂದು ಮುರಿದು ಬಿದ್ದಿರುವ ಅದೆಷ್ಟೋ ಉದಾಹರಣೆಗಳಿವೆ. ಆದಕ್ಕೆ ಕಾರಣಗಳು ಅನೇಕ ಇಲ್ಲೊಂದು ಕಡೆಯೂ ಇಂತಹದ್ದೇ ಘಟನೆಯೊಂದು ನಡೆದಿದೆ.

ಆದರೆ ಇಲ್ಲಿ ಮದುವೆ ಮುರಿದು ಬೀಳಲು ಕಾರಣವಾದ ವಿಚಾರ ಕೇಳಿದರೆ ಹೌದಾ ಎಂದು ಹುಬ್ಬೇರಿಸದೇ ಇರಲ್ಲ. ಯಾಕೆಂದರೆ ಇಲ್ಲಿ ಮದುವೆ ಮುರಿದು ಬೀಳಲು ಕಾರಣವಾಗಿದ್ದು ಎರಡರ ಮಗ್ಗಿ. ಅದು ಹೇಗೆ ನಾವು ಹೇಳುತ್ತೇವೆ ಮುಂದೆ ಓದಿ.

ಈ ಘಟನೆ ನಡೆದಿರುವುದು  ಘಟನೆ ಉತ್ತರ ಪ್ರದೇಶದಲ್ಲಿ. ಇಲ್ಲಿನ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದ ಯುವಕನಿಗೆ ಬೇರೊಂದು ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ದಿನದಂದು ಯುವತಿ ಮತ್ತು ಯುವಕನ ಕುಟುಂಬ ಮದುವೆ ಮಂಟಪಕ್ಕೆ ಬಂದು ತಲುಪಿದೆ. ಇನ್ನೇನು ಮದುವೆಯಾಗಿ ಬಿಡುತ್ತದೆ, ವರ ವಧುವಿನ ಕೊರಳಿಗೆ ಹಾರ ಹಾಕುತ್ತಾನೆ ಎನ್ನುಷ್ಟರಲ್ಲಿ ವಧು, ವರನಿಗೆ ಒಂದು ಸವಾಲು ಹಾಕಿದ್ದಾಳೆ. ಅದುವೇ 2ರ ಮಗ್ಗಿ ಹೇಳಿ, ನನ್ನ ಕೊರಳಿಗೆ ಹಾರ ಹಾಕು ಎಂದು. ಆದರೆ ವರ 2ರ ಮಗ್ಗಿ ಹೇಳುವಲ್ಲಿ ವಿಫಲವಾಗಿದ್ದಾನೆ.

ತಕ್ಷಣ ಅಲ್ಲಿಂದ ವಧು ಹೊರನಡೆದಿದ್ದಾಳೆ. ಈ ವಿಚಾರವಾಗಿ ಮನವೊಲಿಸಲು ಪ್ರಯತ್ನಿಸಿದರೂ ಯಾರು ಏನೇ ಹೇಳಿದರೂ ಕೇಳದೆ ಮದುವೆ ಮುರಿದುಕೊಂಡು ನಡೆದಿದ್ದಾಳೆ. ಯುವತಿಯ ಬಳಿ ವರನ ಕುಟುಂಬದವರು ಆತ ವಿದ್ಯಾವಂತನೆಂದು ಸುಳ್ಳು ಹೇಳಿದ್ದರಂತೆ. ಈ ವಿಚಾರವಾಗಿ ಯುವತಿಗೆ ಮೊದಲೇ ಅನುಮಾನ ಬಂದಿತ್ತಾದರೂ ಕಲ್ಯಾಣ ಮಂಟಪದಲ್ಲಿ ತನ್ನ ಅನುಮಾನ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಯುವತಿ ಈ ರೀತಿ ಮಾಡಿ ನಿಜಾಂಶವನ್ನು ಹೊರತೆಗೆದಿದ್ದಾಳೆ. ಈ ವಿಚಾರವಾಗಿ ಎರಡೂ ಕುಟುಂಬದವರು ಸಂದಾನ ಮಾಡಿಕೊಂಡು ಪ್ರಕರಣ ಇತ್ಯರ್ಥ ಗೊಂಡಿದ್ದು , ಈ ವಿಚಾರವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Leave a Reply

Your email address will not be published. Required fields are marked *

error: Content is protected !!