ಟ್ವಿಟರ್ ಇಲ್ಲ ಎಂದರೆ ಬೇರೆ ‌ವೇದಿಕೆಯ ಮೂಲಕ ಧ್ವನಿ ಎತ್ತುವೆ- ಬಾಲಿವುಡ್ ನಟಿ ಕಂಗನಾ ರಣಾವತ್

ಮುಂಬೈ ಮೇ.5: ಟ್ವಿಟರ್ ಇಲ್ಲ ಎಂದರೆ ಬೇರೆ ‌ವೇದಿಕೆಯ ಮೂಲಕ ಧ್ವನಿ ಎತ್ತುವೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಹೇಳಿದ್ದಾರೆ. 

 ತಮ್ಮ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಿರುವ ‌‌ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಟ್ವಿಟ್ಟರ್ ಮಂದಿ ಅಮೆರಿಕನ್ನರು ಅಂತ ಸಾಬೀತುಪಡಿಸಿದೆ. ಬಿಳಿ ಜನರು ಕಂದು ಬಣ್ಣದವರನ್ನು ಗುಲಾಮರನ್ನಾಗಿ ಮಾಡಿಕೊಂಡು, ನೀವು ಏನು ಮಾಡಬೇಕು, ಏನು ಹೇಳಬೇಕು, ಏನು ಯೋಚಿಸಬೇಕು ಅಂತ ಹೇಳಲು ಇಷ್ಟಪಡುತ್ತಾರೆ.

ಸಿನಿಮಾ ರೂಪದಲ್ಲಿ ನನ್ನ ಧ್ವನಿ ಎತ್ತಲು ನನಗೆ ಸಾಕಷ್ಟು ವೇದಿಕೆಯಿದೆ. ಈ ದೇಶದಲ್ಲಿ ಯಾರಿಗೆ ಹಿಂಸೆ, ದೌರ್ಜನ್ಯ ಸಿಕ್ಕಿದೆಯೋ ಅವರಿಗೆ ಗುಲಾಮತನದಲ್ಲಿ ಬದುಕುತ್ತಿರುವವರಿಗೆ ನನ್ನ ಹೃದಯ ಸದಾ ಮಿಡಿಯುತ್ತಿರುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!