ಪಿಣರಾಯಿ ಆಡಳಿತಕ್ಕೆ ಮತ್ತೆ ಜೈ ಎಂದ ಕೇರಳದ ಜನತೆ- ಎಲ್‌ಡಿಎಫ್‌ ಗದ್ದುಗೆ ಏರುವುದು ಖಚಿತ

ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಭಾರೀ ಮುನ್ನಡೆಯೊಂದಿಗೆ ಸಾಗಿದ್ದು ಮತ್ತೆ ಅಧಿಕಾರಕ್ಕೆ ಏರಲು ಸಜ್ಜಾಗಿದೆ.

140 ಸದಸ್ಯ ಬಲದ ಕೇರಳದ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 71 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ ಈ ಗದ್ದುಗೆ ಏರಲು 71 ದಾಟಿ 91ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿರುವ ಎಲ್‌ಡಿಎಫ್‌ ಮತ್ತೆ ಅಧಿಕಾರದ ಗದ್ದುಗೆ ಏರುವುದು ಖಚಿತ.

ಕೊರೊನಾ ಕಾಲದಲ್ಲಿ ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳು, ಪ್ರವಾಹ ಮೊದಲಾದ ಬಿಕ್ಕಟ್ಟಿನ ಸಂದರ್ಭದಲ್ಲೂ ಎಲ್‌ಡಿಎಫ್‌ ಸರ್ಕಾರದ ನಿರ್ವಹಣೆ ಈ ಮುನ್ನಡೆಗೆ ಕಾರಣ ಎಂದು ಹೇಳಲಾಗಿದೆ. ಇನ್ನು ಎಲ್‌ಡಿಎಫ್‌ 91 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 44 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಈ ನಡುವೆ ಬಿಜೆಪಿ 3 ಅಭ್ಯರ್ಥಿಗಳು ಹಾಗೂ ಇತರೆ 2 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!