ಮಣಿಪಾಲ: ಗೋಡಾನ್’ನಲ್ಲಿ ಅಗ್ನಿ ಅವಘಡ, ಕಟ್ಟಡ ಮಾಲಕನಿಂದ ದೂರು

ಮಣಿಪಾಲ: ಕಟ್ಟಡವೊಂದರ ನೆಲಮಾಳಿಗೆಯಲ್ಲಿ ಇದ್ದ ಗೋಡಾನ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಎ.22 ರಂದು ಮಣಿಪಾಲದಲ್ಲಿ ನಡೆದಿದೆ. ಇದೀಗ ಈ ನೆಲಮಾಳಿಗೆಯನ್ನು ಖರೀದಿಸಿದ ವಿಘ್ನೇಶ್ ನಾಯಕ್ ಎಂಬವರ ನಿರ್ಲಕ್ಷ್ಯ ತನದಿಂದಲೇ ಬೆಂಕಿ ಅವಘಡ ಸಂಭವಿಸಿದೆ ಎಂದು ‌ಕಟ್ಡಡದ ಮಾಲೀಕ ಪಿ ಗಣೇಶ ಶೆಣೈ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅವರು ನೀಡಿರುವ ದೂರಿನ ಪ್ರಕಾರ, ಪಿ. ಗಣೇಶ ಶೆಣೈ ಮಣಿಪಾಲದ ಈಶ್ವರನಗರದಲ್ಲಿ ಹೋಟೆಲ್‌ ಕಟ್ಟಡದ ಮಾಲೀಕರಾಗಿದ್ದು,  ಕಟ್ಟಡದ ನೆಲಮಾಳಿಗೆ ಕೊಠಡಿಯನ್ನು ವಿಘ್ನೇಶ್ ನಾಯಕ್ ಎಂಬುವವರಿಗೆ ಮಾರಾಟ ಮಾಡಿದ್ದರು. ವಿಘ್ನೇಶ್ ಅವರು ತಮ್ಮ ವ್ಯಾಪಾರ ವಹಿವಾಟಿನ ವಸ್ತುಗಳನ್ನು ಇಡಲು ಗೋಡಾನ್ ಆಗಿ ಬಳಸಿಕೊಂಡಿದ್ದರು.

ಎ.22 ರಂದು  ಕಟ್ಟಡದಲ್ಲಿದ್ದ ಗೋಡಾನ್ ಕೊಠಡಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇದು ಇಡೀ ಕಟ್ಟಡಕ್ಕೆ ಹರಡಿರುತ್ತದೆ. ಇದರಿಂದ ಅದೇ ಕಟ್ಟಡದಲ್ಲಿರುವ ಪಿ ಗಣೇಶ ಶೆಣೈರವರ ಕೊಠಡಿಗೆ ಅಂದಾಜು 2,00,000 ರೂ. ಹಾನಿಯಾಗಿದೆ. ವಿಘ್ನೇಶ್ ನಾಯಕ್ ರವರ ನಿರ್ಲಕ್ಷ್ಯತನದಿಂದ ಮತ್ತು ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೇ ಇರುವುದರಿಂದ ಕಟ್ಟಡಕ್ಕೆ ಬೆಂಕಿ ಕಾಣಿಸಿ ಕೊಂಡಿರುವುದಾಗಿ ಕಟ್ಡಡ ಮಾಲೀಕ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!