ಉಡುಪಿ ನ್ಯಾಯಾಲಯದ ಆವರಣದಲ್ಲಿ ಔತಣಕೂಟ- ಪೌರಾಯುಕ್ತರಿಗೆ ನೋಟಿಸ್: ಜಿಲ್ಲಾಧಿಕಾರಿ

ಉಡುಪಿ ಎ.23 (ಉಡುಪಿ ಟೈಮ್ಸ್ ವರದಿ): ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ಔತಣ ಕೂಟ ವಿಚಾರಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳದ ನಗರ ಸಭೆಯ ಆಯುಕ್ತರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೋರ್ಟ್‍ನಲ್ಲಿ ಕಾರ್ಯಕ್ರಮ ನಡೆದಿರುವ ಬಗ್ಗೆ ಮಾಧ್ಯಮದವರ ಕರೆ ಬಂದಾಗ ನಾನೇ ಖುದ್ದಾಗಿ ನಗರ ಸಭೆ ಆಯುಕ್ತರಿಗೆ ಕರೆಮಾಡಿ ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದೇನೆ.

ಆದರೆ, ನಗರ ಸಭೆಯ ಆಯುಕ್ತರ ತಂಡ ಸ್ಥಳಕ್ಕೆ ತೆರಳದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ನೋಟಿಸ್ ನೀಡಲಾಗಿದೆ. ಆಯುಕ್ತರಿಂದ ಈ ಬಗ್ಗೆ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಡೆಯುವ ಕಾರ್ಯಕ್ರಮಗಳನ್ನು ನಿರ್ಬಂಧಿಸಿ ಕ್ರಮ ಕೈಗೊಳ್ಳಲು ಏರಿಯಾ ವೈಸ್ ಪ್ಲೈಯಿಂಗ್ ಸ್ಕ್ವಾಡ್‍ಗಳನ್ನು ನೇಮಕ ಮಾಡಲಾಗಿದೆ.

ಗೈಡ್ ಲೈನ್ಸ್ಗೆ ವಿರುದ್ಧವಾಗಿ ಯಾವುದೇ ಕಾರ್ಯಕ್ರಮ ನಡೆಯುತ್ತಿದ್ದರೆ ಅದನ್ನು ತಡೆಯುವುದು ಈ ಸ್ಕ್ವಾಡ್‍ನ ಕೆಲಸವಾಗಿದೆ. ಜಿಲ್ಲೆಯಲ್ಲಿ ಸದ್ಯ 18 ಜನರ ಪ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದ್ದು, ಅವರನ್ನು ಒಂದೊಂದು ಏರಿಯಾಗಳಿಗೆ ವರ್ಗೀಕರಿಸಿ ಕರ್ತವ್ಯ ನೀಡಲಾಗಿದೆ. ಸದ್ಯ ಇಂದು ನಡೆದ ಘಟನೆಗೆ ಸಂಬಂಧಿಸಿ ಆ ಏರಿಯಾದ ಸ್ಕ್ವಾಡ್ ಗಳು ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಂದ ನೋಟಿಸ್ ನೀಡಲಾಗಿದೆ. ವಿವರಣೆ ನೀಡಬೇಕು ಎಂದು ಕೇಳಿದ್ದು ಅವರ ವಿವರಣೆ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವ್ಯಾಪ್ತಿಯಲ್ಲಿ ನಗರ ಸಭೆ ಆಯುಕ್ತರು ಪ್ರಮುಖ ಸ್ಕ್ವಾಡ್ ಆಗಿದ್ದು ಅವರು ಕ್ರಮ ವಹಿಸಬೇಕಾಗಿತ್ತು. ನಗರ ಸಭಾ ವ್ಯಾಪ್ತಿಗೆ 3 ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದು ಅವರ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!