ಉಡುಪಿ: ಹೋಟೆಲ್ ಮ್ಯಾನೇಜರ್’ಗೆ ಹಲ್ಲೆಗೈದು ತಂಡ ಪರಾರಿ
ಉಡುಪಿ ಎ.16(ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಬನ್ನಂಜೆಯ ಮೊಹಮ್ಮದ್ ಸಾಬಿತ್(24) ಹಲ್ಲೆಗೊಳಗಾದವರು. ಇವರು, ಉಡುಪಿಯ ಹೋಟೆಲ್ ವೊಂದರಲ್ಲಿ ಕ್ಯಾಶಿಯರ್ ಹಾಗೂ ಮೆನೆಜ್ ಮೆಂಟ್ ಕೆಲಸ ಮಾಡಿಕೊಂಡಿದ್ದರು, ಎಂದಿನಂತೆ ಎ,14 ರಂದು ರಾತ್ರಿ ತಮ್ಮ ಕೆಲಸ ಮುಗಿಸಿ ಮನೆಗೆ ಹೋಗಲು ಅವರ ಬೈಕ್‍ನ್ನು ಚಲಿಸುತ್ತಿದ್ದಾಗ ಒರ್ವ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ಅಡ್ಡಗಟ್ಟಿ ನಿಲ್ಲಿಸಿ ಬೈಕಿನ ಕೀ ತೆಗೆಯಲು ಪ್ರಯತ್ನಿಸಿದ್ದಾನೆ.
ಈ ವೇಳೆ ಮೊಹಮ್ಮದ್ ಸಾಬಿತ್ ಅವರು ಬೊಬ್ಬೆ ಹೊಡೆದಿದ್ದು ಆಗ ಮತ್ತಿಬ್ಬರು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ ಬಂದಿದ್ದು, ಮೂವರು ಸೇರಿ ಅವರಿಗೆ ಸುತ್ತುವರಿದು ಏಕಾಏಕಿಯಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆಯನ್ನು ಹಾಕಿದ್ದಾರೆ. ಹಲ್ಲೆಯಿಂದ ಮೊಹಮ್ಮದ್ ಸಾಬಿತ್ ಅವರ ಎದೆ ಮತ್ತು ಬಲಬಾಗದ ಕುತ್ತಿಗೆಯ ಬಳಿ ಗುದ್ದಿದ ನೋವು ಉಂಟಾಗಿದೆ.
ಅಲ್ಲದೆ ಒಬ್ಬಾತ ಕಲ್ಲು ಎಸೆದ ಪರಿಣಾಮ ಅವರ ಎಡಕಾಲಿಗೆ ರಕ್ತಗಾಯ ಹಾಗೂ ಬೈಕಿನ ಕೀಯನ್ನು ಎಳೆಯುವಾಗ ಎಡಕೈಯ ಕಿರು ಬೆರಳಿಗೆ ಗಾಯಗಳಾಗಿದೆ. ಹಲ್ಲೆ ವೇಳೆ ಮೊಹಮ್ಮದ್ ಸಾಬಿತ್ ಅವರು ಕೋಗಿಕೊಂಡಿದ್ದು ಈ ವೇಳೆ ಹೋಟೆಲ್ ನಿಂದ ರಿಜ್ವಾನ್ ಮತ್ತು ನಬೀಲ್ ಅಹಮ್ಮದ್‍ರವರು ಬಂದಿದ್ದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮೊಹಮ್ಮದ್ ಸಾಬಿತ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.