ಉಡುಪಿ: ಚಿನ್ನದಂಗಡಿ ಮಾಲಕನಿಗೆ ಲಕ್ಷಾಂತರ ರೂಪಾಯಿಯ ಚಿನ್ನ ವಂಚಿಸಿದ ಅಕ್ಕಸಾಲಿಗ
ಉಡುಪಿ ಎ.16(ಉಡುಪಿ ಟೈಮ್ಸ್ ವರದಿ): ಚಿನ್ನದ ಕರಿಮಣಿ ಸರ ಮಾಡಿಸಿಕೊಡುವುದಾಗಿ ನಂಬಿಸಿ ಚಿನ್ನದ ಗಟ್ಟಿ ಪಡೆದು ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಜಿ. ಜಯ ಆಚಾರ್ಯ ವಂಚನೆಗೆ ಒಳಗಾದವರು.
ಉಡುಪಿಯ ರಥಬೀದಿಯಲ್ಲಿ ಜಿ. ಜಯ ಆಚಾರ್ಯ ಅವರು ನೋವೆಲ್ಟಿ ಜ್ಯುವೆಲ್ಲರಿ ಸಂಸ್ಥೆಯನ್ನು ನಡೆಸಿಕೊಂಡಿದ್ದು, ಇವರು ತಮ್ಮ ಸಂಸ್ಥೆಯಲ್ಲಿ ರೆಡಿ ಅಭರಣಗಳನ್ನು ಮಾರಾಟ ಮಾಡುವ ಜೊತೆಗೆ ಆಭರಣಗಳನ್ನು ಮಾಡಿಸಿಕೊಡುತ್ತಿದ್ದರು. ಫೆ.13 ರಂದು ಇವರ ಪರಿಚಯದ ಮಂಜುನಾಥ ಆಚಾರ್ಯ ಚಿನ್ನದ ಕರಿಮಣಿ ತಯಾರಿಸಿ ಕೊಡುವುದಾಗಿ ಜಿ. ಜಯ ಆಚಾರ್ಯ ಅವರಿಂದ 4 ಲಕ್ಷ ಮೌಲ್ಯದ 92.970 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗಿದ್ದ. ಆಭರಣ ತಯಾರಿಸಿ ಕೊಡುವುದಾಗಿ ನಂಬಿಸಿ ಹೋದ ಮಂಜುನಾಥ ಆಚಾರ್ಯ ವಾಪಾಸ್ಸು ಬಾರದೆ ವಂಚಿಸಿರುವುದಾಗಿ ಜಿ. ಜಯ ಆಚಾರ್ಯ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.