ಮಂಗಳೂರು: ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಬೆಂಕಿ ಅವಘಡ
ಮಂಗಳೂರು, ಎ.15(ಉಡುಪಿ ಟೈಮ್ಸ್ ವರದಿ): ನಗರದ ಅತ್ತಾವರದಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದ ಐಟಿ ಕಚೇರಿಯ ಅಮೂಲ್ಯ ದಾಖಲೆ ಪತ್ರಗಳ ಸಹಿತ ಸೊತ್ತುಗಳು ಬೆಂಕಿಗೆ ಸುಟ್ಟು ಭಸ್ಮವಾಗಿದೆ.
ಐಟಿ ಕಟ್ಟಡದ ಮೂರನೆ ಮಹಡಿಯಲ್ಲಿರುವ ಎಸಿಯಲ್ಲಿ ಶಾರ್ಟ್ ಸಕ್ರ್ಯೂಟ್ ಉಂಟಾಗಿದ್ದು, ಕ್ಷಣದಲ್ಲಿ ಕಟ್ಟಡಕ್ಕೆ ಬೆಂಕಿ ಆವರಿಸಿದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪಾಂಡೇಶ್ವರ ಅಗ್ನಿಶಾಮದ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಆದರೆ ಅಷ್ಟರಲ್ಲೇ ಐಟಿ ಕಚೇರಿಯ ದಾಖಲೆಪತ್ರಗಳು, ಮೇಜು, ಕುರ್ಚಿ,ಫ್ಯಾನ್ ಗಳು ಬೆಂಕಿಗಾಹುತಿಯಾಗಿದ್ದವು.