ಉಡುಪಿ: ಇಂದು ಮತ್ತೆ ಕೋವಿಡ್ ಪಾಸಿಟಿವ್ ಪ್ರಕರಣದಲ್ಲಿ ಏರಿಕೆ
ಉಡುಪಿ ಏ.12(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಹಲವು ದಿನಗಳ ಬಳಿಕ ಇಂದು ಮತ್ತೆ ಕೋವಿಡ್ ಪಾಸಿಟಿವ್ ಪ್ರಕರಣ ಮೂರಂಕಿಯಲ್ಲಿ ಪತ್ತೆಯಾಗಿದೆ.
ಇಂದು 101 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಉಡುಪಿಯಲ್ಲಿ 63, ಕುಂದಾಪುರದಲ್ಲಿ 22, ಕಾರ್ಕಳದಲ್ಲಿ 14 ಹಾಗೂ ಹೊರ ಜಿಲ್ಲೆಯ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ 390 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಏ.11 ರ ವೇಳೆಗೆ 4,47,174 ಮಂದಿಯನ್ನು ಕೋವಿಡ್ ಪರೀಕ್ಷೆ ಗೆ ಒಳಪಡಿಸಿದ್ದು, ಈ ವರೆಗೆ 26,073 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 25,491 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು , ಈ ವರೆಗೆ 192 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.