ಉಡುಪಿ ಸಹಿತ 8 ನಗರಗಳಲ್ಲಿ ಶನಿವಾರದಿಂದ (ಏ.10) ನೈಟ್ ಕರ್ಫ್ಯೂ!
ಬೆಂಗಳೂರು: (ಉಡುಪಿ ಟೈಮ್ಸ್ ವರದಿ)ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಾರ್, ಪಬ್, ರೆಸ್ಟೋರೆಂಟ್ ಗಳು ಬಂದ್ ಆಗಲಿವೆ. ರಾಜ್ಯದ ಕೆಲವು ಜಿಲ್ಲೆಗಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತದೆ. ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರು, ತುಮಕೂರು, ಉಡುಪಿ, ಮಣಿಪಾಲ, ಮೈಸೂರು, ಸೇರಿ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತದೆಂದು ಘೋಷಿಸಿದ್ದಾರೆ. ಇದು ಕೇವಲ ಪ್ರಾಯೋಗಿಕ ಜಾರಿಯಾಗಿದ್ದು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರವೇ ನಿಯಮ ಜಾರಿಯಾಗುತ್ತದೆ, ಅಗತ್ಯ ಸೇವೆ ಹೊರತಾಗಿ ಎಲ್ಲಾ ಕಮರ್ಷಿಯಲ್ ಚಟಿವಟಿಕೆಗಳೂ ನಿರ್ಬಂಧಕ್ಕೊಳಗಾಗಲಿದೆ ಎಂದರು.
ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು, ಗುರುವಾರ ಬರೋಬ್ಬರಿ 6570 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 10,40,130ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 36 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,767ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು 4,422 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,64,438ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 22 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು 2393 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 9,73,949ಕ್ಕೆ ಏರಿಕೆಯಾಗಿದೆ. ಇನ್ನು 53, 395 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 357 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
People need psychological consoling.
Neklena saawu
Corona cases increases after publishing such news…
ಏಪ್ರಿಲ್, ಮೇ ತಿಂಗಳು ಹಬ್ಬ, ಹರಿದಿನ
ಮದುವೆ ಹಾಗೂ ಇನ್ನಿತರ ಕಾರ್ಯ ಕ್ರಮ ಹೆಚ್ಚು ಹೆಚ್ಚು ನೆಡೆಯುತ್ತಿದ್ದು ಜನ ಸಂದಣಿ ಹೆಚ್ಚಾಗಿ ಒಂದೇಕಡೆ ಸೇರುತಾರೇ. ಕಾರ್ಯಕ್ರಮ ಯಾವುದಿದ್ದರೂ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು, ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಣೆ ಮಾಡಬೇಕು ಎಲ್ಲೂ ಗುಂಪು ಗುಂಪು ಜನರು ಸೇರಬಾರದು ಲಸಿಕೆ ತೆಗೆದುಕೊಳ್ಳದವರು ಬೇಗ ಬೇಗನೆ ತೆಗೆದುಕೊಂಡು ಸರಕಾರದ ಆದೇಶ ಪಾಲನೆ ಕಡ್ಡಾಯವಾಗಿ ಮಾಡಬೇಕು. ಏನಾದರೂ carona ಲಕ್ಷಣ ಗೋಚರ ವಾದ್ರೆ ಕೂಡಲೇ ಡಾಕ್ಟರ್ ಸಲಹೆ ಪಾಲನೆ ಮಾಡಬೇಕು.ಬಿಸಿನೀರು,ಕಷಾಯ, ತುಳಸಿ ಮುಂತಾದವುಗಳನ್ನು ಸೇವಿಸಬೇಕು. ಧೈರ್ಯದಿಂದ ಎಲ್ಲವನ್ನು ಎದುರಿಸಬೇಕು.