ಶಿರ್ವಾ: ಸಿ.ಎ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಆತ್ಮಹತ್ಯೆ

ಶಿರ್ವಾ: ಬಾವಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಪುವಿನ ಬೆಳಪು ಗ್ರಾಮದಲ್ಲಿ ಇಂದು (ಏ.8) ನಡೆದಿದೆ. ನಿರಂಜನ್ ಶೆಟ್ಟಿ (59) ಆತ್ಮಹತ್ಯೆ ಮಾಡಿಕೊಂಡವರು.

ಇವರು ಬೆಳಪು ಸಿ.ಎ ಬ್ಯಾಂಕ್ ನ ಪಣಿಯೂರು ಶಾಖೆಯಲ್ಲಿ ಕ್ಲರ್ಕ್ ಕೆಲಸ ಮಾಡಿಕೊಂಡಿದ್ದು, ಅನಾರೋಗ್ಯದ ನಿಮಿತ್ತ ಒಂದು ವಾರದ ಹಿಂದೆ ಕೆಲಸಕ್ಕೆ ರಾಜೀನಾಮೆಯನ್ನು ನೀಡಿದ್ದರು.

ಇವರು ಸುಮಾರು 2 ವರ್ಷಗಳಿಂದ ಲಿವರ್ ಮತ್ತು ಲಂಗ್ಸ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಿರಲಿಲ್ಲ. ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಏ.8 ರಂದು ಬೆಳಿಗ್ಗಿನ ಜಾವ ತಮ್ಮ ವಾಸ್ತವ್ಯದ ಮನೆಯ ಹಿಂಬದಿಯಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!