ಗುಜರಾತ್: ಲವ್ ಜಿಹಾದ್, ವಿವಾಹ ಮೂಲಕ ಮೋಸದ ಮತಾಂತರ ವಿರೋಧಿ ಮಸೂದೆ ಅಂಗೀಕಾರ

ಗಾಂಧಿನಗರ: ಲವ್ ಜಿಹಾದ್ ಅಥವಾ ವಿವಾಹದ ಮೂಲಕ ಮೋಸದ ಮತಾಂತರ ವಿರುದ್ಧದ ಮಸೂದೆಯನ್ನು ಗುಜರಾತ್ ವಿಧಾನಸಭೆ ಏ.1 ರಂದು ಅಂಗೀಕರಿಸಿದೆ. 

ಮದುವೆ ಮೂಲಕ ಒತ್ತಾಯ ಮತಾಂತರ ಮಾಡಿದರೆ 10 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ, 2ಲಕ್ಷದವರೆಗಿನ ದಂಡ ವಿಧಿಸಬಹುದಾಗಿದೆ. 

2003 ರ ಕಾನೂನಿಗೆ ತಿದ್ದುಪಡಿ ತರಲಾಗಿರುವ ಮಸೂದೆ ಇದಾಗಿದ್ದು, ಬಲಾತ್ಕಾರ ಅಥವಾ ಆಮಿಷದ ಮೂಲಕ ಮತಾಂತರವನ್ನು ಅಪರಾಧವನ್ನಾಗಿ ಪರಿಗಣಿಸಲಿದೆ. ಧಾರ್ಮಿಕ ಮತಾಂತರದ ಉದೇಶದಿಂದ ಮಹಿಳೆಯರನ್ನು ವಿವಾಹವಾಗುತ್ತಿರುವುದನ್ನು ತಡೆಗಟ್ಟಲು ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿದೆ. 

ಗುಜರಾತ್ ವಿಧಾನಸಭೆಯಲ್ಲಿನ ಪ್ರಮುಖ ವಿಪಕ್ಷ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ಲವ್ ಜಿಹಾದ್ ಕಾನೂನನ್ನು ಜಾರಿಗೆ ತಂದಿತ್ತು. 

Leave a Reply

Your email address will not be published. Required fields are marked *

error: Content is protected !!