ಫ್ರಾನ್ಸ್: ಕೊರೋನಾ ಪ್ರಕರಣ ಗಣನೀಯ ಏರಿಕೆ- ಮೂರನೇ ಬಾರಿ ಲಾಕ್ ಡೌನ್ ಘೋಷಣೆ

ಪ್ಯಾರಿಸ್: ಫ್ರಾನ್ಸ್ ನಲ್ಲಿ ಮಾರಕ ಕೊರೋನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೊರೋನಾವನ್ನು ತಡೆಗಟ್ಟುವ ಸಲುವಾಗಿ ಫ್ರಾನ್ಸ್ ನಲ್ಲಿ ಮೂರನೇ ಬಾರಿ ಲಾಕ್ ಡೌನ್ ಘೋಷಿಸಲಾಗಿದೆ. ಇದರ ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಫ್ರಾನ್ಸ್‍ನಲ್ಲಿ ಶಾಲಾ ಕಾಲೇಜುಗಳನ್ನು ಮೂರು ವಾರಗಳ ಕಾಲ ಮುಚ್ಚಲಾಗಿದೆ.

 ಈ ಕುರಿತಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ  ಇಮ್ಯಾನುವೆಲ್ ಮಾಕೋರ್ನ್ ಅವರು, ಕೊರೋನಾ ಕುರಿತು ಇದೀಗ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಇದು ನಿಯಂತ್ರಣ ತಪ್ಪುವ ಸಾಧ್ಯತೆಯಿದೆ. ಆದ್ದರಿಂದ ಲಾಕ್ ಡೌನ್ ಅನಿವಾರ್ಯ ಎಂದು ತಿಳಿಸಿದ್ದಾರೆ.

ರಾಜಧಾನಿ ಪ್ಯಾರಿಸ್ ನಲ್ಲಿ ಈಗಾಗಲೇ ನಿಬರ್ಂಧ ಜಾರಿಯಲ್ಲಿದ್ದು, ಇದೀಗ ಫ್ರಾನ್ಸ್ ನ ಎಲ್ಲ ಪ್ರದೇಶಗಳಿಗೂ ನಿಬರ್ಂಧ ವಿಸ್ತರಣೆಯಾಗಲಿದೆ. ಮಾರಕ ಕೊರೋನಾದಿಂದ ಫ್ರಾನ್ಸ್ ನಲ್ಲಿ ಸುಮಾರಿ ಒಂದು ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಕೊರೋನಾ ತಡೆ ಲಸಿಕೆ ಉತ್ಪಾದನೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!