ಹೆಮ್ಮಾಡಿ: ಕಾರು ಪಲ್ಟಿ, ಹೂಡೆಯ ಮಹಿಳೆ ಸ್ಥಳದಲ್ಲಿಯೇ ಮೃತ್ಯು, ನಾಲ್ಕು ಮಕ್ಕಳಿಗೆ ಗಾಯ

ಕುಂದಾಪುರ: ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ಮಹಿಳೆ ಮೃತಪಟ್ಟು ನಾಲ್ವರು ಮಕ್ಕಳು ಗಾಯಗೊಂಡ  ಘಟನೆ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ. 

ಕೆಮ್ಮಣ್ಣು ಹೂಡೆಯ ಸಿಬ್ಗತುಲ್ಲಾ ಎಂಬವರ ಪತ್ನಿ ಸುಹಾನ(30) ಮೃತಪಟ್ಟವರು. ಸಾಹಿಮ್, ಸಿದ್ರಾ, ಮನ್ಹಾ, ಮರಿಯಮ್ ಗಾಯಗೊಂಡ ಮಕ್ಕಳು. ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಭಟ್ಕಳದಿಂದ ಹೂಡೆಗೆ ಬರುತ್ತಿದ್ದ ಸಿಬ್ಗತುಲ್ಲಾ ಚಲಾಯಿಸುತ್ತಿದ್ದ ಕಾರು ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ಬರುತ್ತಿದ್ದಂತೆ  ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಸುಹಾನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 thought on “ಹೆಮ್ಮಾಡಿ: ಕಾರು ಪಲ್ಟಿ, ಹೂಡೆಯ ಮಹಿಳೆ ಸ್ಥಳದಲ್ಲಿಯೇ ಮೃತ್ಯು, ನಾಲ್ಕು ಮಕ್ಕಳಿಗೆ ಗಾಯ

Leave a Reply to Sathyaraj Cancel reply

Your email address will not be published. Required fields are marked *

error: Content is protected !!