ಮನ್ಸೂಖ್ ಹಿರೇನ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ದಯಾನಾಯಕ್ ನೇತೃತ್ವದ ತಂಡ

ಮುಂಬಯಿ: ಒಂದು ಕಾಲದಲ್ಲಿ ಮುಂಬಯಿಯನ್ನು ಆಳುತ್ತಿದ್ದ ಭೂಗತ ಲೋಕಕ್ಕೆ ಸಿಂಹಸ್ವಪ್ನರಾಗಿದ್ದ ಎನ್‍ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಾ.5 ರಂದು ನಡೆದ ಮನ್ಸೂಖ್ ಹಿರೇನ್ ಕೊಲೆ ಪ್ರಕರಣವನ್ನು ಭೇದಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಮಾ. 5 ರಂದು ಮನ್ಸುಖ್ ಹಿರೇನ್ ಅವರ ಮೃತದೇಹ ಪತ್ತೆಯಾದ ಬಳಿಕ ಈ ಪ್ರಕರಣದಲ್ಲಿ ಅನೇಕ ಬೆಳವಣಿಗೆಗಳು ಕಂಡವು. ಈ ನಡುವೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಆರು ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಎನ್‍ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಗೆ ಮುಂಬಯಿ ಪಶ್ಚಿಮ ವಲಯ ಎಟಿಎಸ್ ಘಟಕದ ಉಸ್ತುವಾರಿ ವಹಿಸಲಾಗಿತ್ತು. ಈ ನಡುವೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ದಯಾನಾಯಕ್ ಅವರು ಪ್ರಮುಖ ಪಾತ್ರವಹಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಸಚಿನ್ ವಾಝೆ ಎಂಬುದು ಬೆಳಕಿಗೆ ಬಂದ ಬಳಿಕ ದಯಾ ನಾಯಕ್ ನೇತೃತ್ವದ ತಂಡವು ಕೊಲೆ ಪ್ರಕರಣದ ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದೆ. ಅಲ್ಲದೆ ಇನ್ನೂ ಹಲವಾರು ಮಂದಿ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉದ್ಯಮಿ ಅಂಬಾನಿ ಅವರ ಬಂಗ್ಲೆ ಎದುರು ಪತ್ತೆಯಾದ ಸ್ಫೋಟಕ ತುಂಬಿದ ವಾಹನ ಮತ್ತು ಮನ್ಸೂಖ್ ಹಿರೇನ್ ಕೊಲೆ ಪ್ರಕರಣದ ತನಿಖೆಯಲ್ಲಿ ಮುಂಬಯಿ ಪೆÇಲೀಸರು ವಿಫಲರಾಗಿದ್ದಾರೆಂದು ಆರೋಪಿಸಿ ಬಿಜೆಪಿಯು ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿತ್ತು. ಬಳಿಕ ಈ ಪ್ರಕರಣವನ್ನು ಸರಕಾರ  ಎಟಿಎಸ್‍ಗೆ ಹಸ್ತಾಂತರಿಸಿತ್ತು. ಮುಂಬಯಿ ಪಶ್ಚಿಮ ವಲಯ ಎಟಿಎಸ್ ಘಟಕದ ಉಸ್ತುವಾರಿ ದಯಾ ನಾಯಕ್ ನೇತೃತ್ವದ ತಂಡವು ತನಿಖೆ ಕೈಗೊಂಡ ಎರಡು ದಿನಗಳಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ಮನ್ಸೂಖ್ ಹಿರೇನ್ ಕೊಲೆ ಪ್ರಕರಣದಲ್ಲಿ ಎನ್‍ಐಎ ಬಂಧನದಲ್ಲಿದ್ದ ಸಚಿನ್ ವಾಝೆ ಭಾಗಿಯಾಗಿದ್ದ ಎಂದು ತಿಳಿದುಬಂದಿದ್ದು, ಹಿರೇನ್ ಹತ್ಯೆಯ ಹಿಂದೆ ವಾಝೆ ಕೈವಾಡವಿದೆ ಎಂದು ವಿನಾಯಕ್ ಶಿಂಧೆ ಒಪ್ಪಿ ಕೊಂಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಈ ಮಧ್ಯೆ ಎಟಿಎಸ್ ಡಿಐಜಿ ಶಿವದೀಪ್ ಲಾಂಡೆ ಅವರು ಹಿರೇನ್ ಕೊಲೆ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!