ಶ್ರೀಲಂಕಾ: 40 ಭಾರತೀಯ ಮೀನುಗಾರರ ಬಿಡುಗಡೆ

ಕೊಲಂಬೋ : ಶ್ರೀಲಂಕಾದ ಸರಹದ್ದಿನ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದಿದ್ದ ಶ್ರೀಲಂಕಾ ನೌಕಾಪಡೆ ಇದೀಗ 40 ಮೀನುಗಾರರನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ಆದರೆ, ವಶಕ್ಕೆ ಪಡೆದಿದ್ದ ಉಳಿದ 14 ಮಂದಿ ಪುದುಚೇರಿ ಮೂಲದ ಮೀನುಗರರನ್ನು ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿದೆ.

ಮಾ.25 ರಂದು ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಐದು ದೋಣಿಗಳು ಮತ್ತು ಅದರಲ್ಲಿದ್ದ 54 ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ಬಂಧಿಸಿತ್ತು. ಇದೀಗ ಬಂಧಿಸಿದ ಭಾರತದ 54 ಮೀನುಗಾರರ ಪೈಕಿ 40 ಮೀನುಗಾರರನ್ನು ಮಾ.26 ರಂದು ನೌಕಾಪಡೆ ಬಿಡುಗಡೆಗೊಳಿಸಿದೆ ಎಂದು ಮಿಳುನಾಡು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!