ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯ್ಬೇಕು ಅನ್ನಿಸ್ತಿದೆ: ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ

ಬೆಂಗಳೂರು:  ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ ಬಹಿರಂಗ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಶುಕ್ರವಾರ ಯುವತಿಯ ವಿಡಿಯೋ ಹೇಳಿಕೆ ಮತ್ತು ಆಡಿಯೋ ಬಹಿರಂಗಗೊಂಡಿತ್ತು. ಸಿಡಿ ಪ್ರಕರಣದ ಯುವತಿಯ ಮತ್ತೊಂದು ವಿಡಿಯೋ ಬೆಳ್ಳಂಬೆಳಗ್ಗೆ ಬಿಡುಗಡೆಯಾಗಿದೆ. 

ನನಗೆ ಬದುಕ್ಬೇಕೋ ಸಾಯ್ಬೇಕೋ ಒಂದೂ ಗೊತ್ತಾಗ್ತಿಲ್ಲ. ಮಾಧ್ಯಮದವರಿಗೆ ನಾನು ಒಂದು ಹೇಳ್ತೀನಿ. ಏನೇ ಮಾಹಿತಿ ಸಿಕ್ಕರೂ ಯಾವುದು ಸತ್ಯ, ಯಾವುದು ಸುಳ್ಳು ಎಂದು ಪರಿಗಣಿಸಿ ಸುದ್ದಿ ಪ್ರಸಾರ ಮಾಡಿ ಎಂದು ಕೇಳ್ಕೋತೀನಿ. ಮಾರ್ಚ್ 2ರಂದು ಸಿಡಿ ರಿಲೀಸ್ ಆಯ್ತು. ಆ ಸಿಡಿಯನ್ನು ಯಾರು ರಿಲೀಸ್ ಮಾಡಿದರೆಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ವಿಡಿಯೋ ಬರುತ್ತಿರುವುದನ್ನು ನೋಡಿ ಕರೆ ಮಾಡಿದರು. ನಾನು ನರೇಶ್ ಅಣ್ಣಗೆ ಕರೆ ಮಾಡಿ ಮಾತನಾಡಿದ್ದೆ. ಏನು ಮಾಡಲಿ ಅಣ್ಣಾ ಎಂದು ನರೇಶ್ ಜತೆ ಮಾತಾಡಿದ್ದೆ. 

ಈ ವಿಚಾರದಲ್ಲಿ ನಾನು ತುಂಬಾ ಚಿಕ್ಕವನು ಎಂದಿದ್ದರು. ಇದಕ್ಕೆ ಪೊಲಿಟಿಕಲ್ ಸಪೋರ್ಟ್ ಬೇಕೆಂದು ಹೇಳಿದ್ದರು. ತುಂಬಾ ದೊಡ್ಡವರ ಜತೆ ಮಾತಾಡೋಣ ಎಂದು ಹೇಳಿದ್ದರು. ಸಿದ್ದರಾಮಯ್ಯ, ಡಿಕೆಶಿ ಜತೆ ಮಾತನಾಡೋಣ ಎಂದಿದ್ದರು. ಅವರ ಜತೆ ಮಾತನಾಡಿದರೆ ನ್ಯಾಯ ಸಿಗುತ್ತೆಂದು ನರೇಶ್ ಅಣ್ಣ ಹೇಳಿದ್ದರು.

ಅಲ್ಲದೇ, ನಾನಿರುವ ಜಾಗಕ್ಕೆ ನರೇಶ್ ಅಣ್ಣ ಅವರು ಬಂದಿದ್ದರು. ಡಿ.ಕೆ.ಶಿವಕುಮಾರ್ ಮನೆಗೆ ಹೋಗೋಣ ಎಂದಿದ್ದರು. ಆ ಸಮಯದಲ್ಲಿ ನಮ್ಮ ಮನೆಯಿಂದ ಪದೇಪದೆ ಕರೆಮಾಡುತ್ತಿದ್ದರು. ನಮ್ಮ ಮನೆಯವರು ಅಳುವುದು ಕೇಳಿ ಭಯವಾಯಿತು. ಅವರ ಜೀವಕ್ಕೆ ಏನಾದ್ರು ಆಗುತ್ತೆಂಬ ಭಯ ನನಗಿತ್ತು. ಆಗ ನಮ್ಮ ಪೋಷಕರನ್ನು ನಾನು ಸಮಾಧಾನ ಮಾಡಿದ್ದೆ. ಡಿಕೆಶಿ ಮನೆಗೆ ಹೋಗುತ್ತಿದ್ದೇನೆಂದು ಅವರಿಗೆ ಹೇಳಿದ್ದೆ. ನಾವು ಡಿಕೆಶಿ ಮನೆಯ ಬಳಿ ಹೋಗಿದ್ದೆವು ಆದರೆ ಅವರು ಸಿಕ್ಕಿರಲಿಲ್ಲ. ಭೇಟಿ ಮಾಡಲು ಹೋದಾಗ ಡಿ.ಕೆ.ಶಿವಕುಮಾರ್ ಸಿಗಲಿಲ್ಲ

ರಮೇಶ್ ಜಾರಕಿಹೊಳಿ ಒಂದೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ ಎಂದು ಹೇಳುತ್ತಾರೆ. ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳುತ್ತಾರೆ. ಎಲ್ಲರನ್ನೂ ಜೈಲಿಗೆ ಹಾಕಿಸುವುದಾಗಿಯೂ ರಮೇಶ್ ಹೇಳುತ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ? ಜನರೇ ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತೇನೆಂದು ಹೇಳುತ್ತಾರೆ.

ನಾನು ಸೇಫಾಗಿದ್ದೇನೆ, ನಾನು ಕಿಡ್ನ್ಯಾಪ್ ಆಗಿಲ್ಲ. ನಮ್ಮ ಪೋಷಕರು ಎಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ನಮ್ಮ ತಂದೆ, ತಾಯಿ, ಅಜ್ಜಿ, ಸಹೋದರರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅವರನ್ನು ರಕ್ಷಣೆ ನೀಡಿ. ಎಸ್‌ಐಟಿ ಅಧಿಕಾರಿಗಳ ಬಳಿ ಮನವಿ ಮಾಡಿದ ಯುವತಿ ಕಳೆದ 24 ದಿನಗಳಿಂದ ತುಂಬಾ ಟಾರ್ಚರ್ ಆಗುತ್ತಿದೆ. ನಾನು ಏನೇ ಹೇಳಲು ಬಂದ್ರು ಅದು ರಿವರ್ಸ್ ಆಗುತ್ತಿದೆ. ನನ್ನ ಮಾನ, ಮರ್ಯಾದೆ ಹೋಗಿದೆ, ನ್ಯಾಯ ಸಿಗಬೇಕು. ನಾನು ಸಂತ್ರಸ್ತೆಯಾಗಿರುವುದರಿಂದ ನ್ಯಾಯ ಸಿಗಬೇಕು ಎಂದು ವಿಡಿಯೊದಲ್ಲಿ ಯುವತಿ ಹೇಳಿಕೆ ನೀಡಿದ್ದಾಳೆ.

ನಮ್ಮ ತಂದೆ, ತಾಯಿ ತಲೆ ಬೇಕಿದ್ದರೂ ತೆಗೆಯಬಹುದು. ನಾಳೆ ದಿನ ನನ್ನನ್ನೇ ಸಾಯಿಸಬಹುದು. ಏನಾಗುತ್ತೆಂದು ಯಾರಿಗೂ ಗೊತ್ತಿಲ್ಲ. ನಾನು ಹೇಳಿಕೆ ನೀಡಬೇಕಾದರೆ ಪೋಷಕರು ಇರಬೇಕು. ನನ್ನ ಕಣ್ಣು ಮುಂದೆ ತಂದೆ, ತಾಯಿ, ಅಜ್ಜಿ ಸಹೋದರಿರಬೇಕು. ‘ನನ್ನ ಪೋಷಕರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’. ನನಗೆ ಅಷ್ಟೊಂದು ಕಿರುಕುಳವಾಗುತ್ತಿದೆ. ನನಗೆ ನ್ಯಾಯ ಕೊಡಿಸಿ ಎಂದು ಯುವತಿ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾಳೆ. 

ನನಗೆ ಕೊಡೋ ಟಾರ್ಚರ್‌ಗೆ ಬದುಕ್ಬೇಕೋ ಸಾಯ್ಬೇಕೋ ಅಂತಾನೆ ಗೊತ್ತಾಗ್ತಿಲ್ಲ. ನಾನು ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸತ್ತೋಗ್ಬಿಡ್ಬೇಕು ಅಂತಾ ಅನ್ನಿಸ್ತಿದೆ. ಆ ಲೆವೆಲ್‌ಗೆ ಟಾರ್ಚರ್‌ ಆಗ್ತಿದೆ. ಎಲ್ಲ ಜನರಲ್ಲಿ ಕೇಳ್ಕೊಳ್ಳೋದು ಇಷ್ಟೇ. ದಯವಿಟ್ಟು ನ್ಯಾಯ ಕೊಡಿಸಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!