ಇಂದಿನ (ಮಾ.25) ನಿಮ್ಮ ರಾಶಿ ಭವಿಷ್ಯ


ಮೇಷ ರಾಶಿ: ಹಿಂದಿನ ದುಡುಕುತನ, ಮುಂಗೋಪ ಕಡಿಮೆಯಾಗಿ ಬಂಧುಗಳೊಡನೆ ಬೆರೆಯುವಿರಿ. ಹಿರಿಯರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಸೋದರರಲ್ಲಿ ಒಗ್ಗಟ್ಟು ಮೂಡಿ ಕುಟುಂಬದ ಕಷ್ಟ, ಸುಖಗಳಲ್ಲಿ ಸಮಪಾಲು ಹಂಚಿಕೊಳ್ಳುವಿರಿ. ಉದ್ಯಮದಲ್ಲಿ ಹೆಚ್ಚಿನ ಯಶಸ್ಸು ಆದಾಯ ತೀವ್ರ ಹೆಚ್ಚಳವಾಗುವುದು. 

ವೃಷಭ ರಾಶಿ: ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ. ಇದರಿಂದ ಆಗಬೇಕಾದ ಹಾಗೂ ಆಗಬೇಕಾಗಿರುವ ಕೆಲಸ ಸುಲಭವಾಗಿ ನೆರವೇರಲಿವೆ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಹಿರಿಯ ಮತ್ತು ಕಿರಿಯರೊಡನೆ ಸ್ನೇಹದಿಂದ ವರ್ತಿಸಿ. ನಿಮ್ಮ ಮಕ್ಕಳಿಗಾಗಿ ಖರ್ಚುಗಳು ಜಾಸ್ತಿ ಆಗುವವು. 

ಮಿಥುನ ರಾಶಿ: ಕಾರ್ಯಕ್ಷೇತ್ರದಲ್ಲಿ ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯ ಬೇಕಾದ ಪರಿಸ್ಥಿತಿಯು ತೋರಿ ಬರುತ್ತದೆ. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಒಮ್ಮೊಮ್ಮೆ ಸಹೋದ್ಯೋಗಿಗಳ ವರ್ತನೆಯಿಂದ ಮಾನಸಿಕವಾಗಿ ಉದ್ವೇಗತರಲಿದೆ. ಸಮಾಧಾನದಿಂದ ಮುಂದು ವರಿಯಿರಿ. ಧನಾರ್ಜನೆಯಲ್ಲಿ ಪ್ರಗತಿ ಇದ್ದರೂ ಖರ್ಚುವೆಚ್ಚಗಳು ಅಧಿಕ ರೂಪ ದಲ್ಲಿದ್ದಾವು. 

ಕರ್ಕಾಟಕ ರಾಶಿ: ಅನ್ಯ ಕಾರ್ಯಗಳ ಒತ್ತಡದಿಂದ ಮಾನಸಿಕ ಅಶಾಂತಿಗೆ ಕಾರಣವಾದೀತು. ಸ್ನೇಹಿತರಲ್ಲಿ ಕಲಹ, ಮನಸ್ತಾಪದ ಪ್ರಸಂಗ ತೋರಿ ಬಂದೀತು. ಆರೋಗ್ಯ ಭಯ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರಣೆಯಲ್ಲಿ ವಿವಾದಗಳು ಕಂಡು ಬರಲಿದೆ. ಹೊಂದಾಣಿಕೆಯ ಪ್ರಯತ್ನ ಅಗತ್ಯವಿದೆ. ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹವು ಲಭಿಸಲಿದೆ. ವಿದ್ಯಾರ್ಥಿಗಳು ತಮ್ಮ ಉದಾಸೀನತೆಯನ್ನು ಬಿಟ್ಟು ಪ್ರಯತ್ನಬಲ ಮುಂದುವರಿಸಬೇಕು.

ಸಿಂಹ ರಾಶಿ: ಮತ್ತೊಬ್ಬರ ಸಹಾಯವಿಲ್ಲದೆ ಕೆಲಸ ಮುಗಿಸಿದ ತೃಪ್ತಿ ನಿಮ್ಮದಾಗುವುದು. ಇದರಿಂದ ನಿಮಗೆ ಆತ್ಮವಿಶ್ವಾಸ ಮೂಡಿ ಅಭಿಮಾನ ಪಡುವಿರಿ. ಆಸ್ತಿ ಖರೀದಿಗೆ ಉತ್ತಮ ಸಮಯವಾಗಿದ್ದು, ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಹಣದ ಸಹಾಯ ತಾನಾಗಿಯೇ ಬರುವುದರಿಂದ ಚಿಂತೆ ಬೇಡ. ಮತ್ತೊಬ್ಬರೊಂದಿಗೆ ವಿನಾಕಾರಣ ಮಾತಿನ ಚಕಮಕಿ ಬೇಡ. 


ಕನ್ಯಾ ರಾಶಿ: ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆಯೊಂದರ ಅನುಭವವು ಆಗಲಿದೆ. ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳ ಬಿಗು ವಾತಾವರಣವು ಅಸಮಾಧಾನಕ್ಕೆ ಕಾರಣವಾದೀತು. ಕೌಟುಂಬಿಕ ವಾದ-ವಿವಾದ, ಕಲಹಗಳು ಹಂತ ಹಂತವಾಗಿ ಉಪಶಮನವಾಗಲಿವೆ. ಹಿತ ಶತ್ರುಗಳಿಂದ ವಿರೋಧಿಗಳಿಗೆ ಆಮಿಷ, ಪ್ರಲೋಭನೆಯಿಂದ ರಾಜಕೀಯ ವರ್ಗದವರಿಗೆ ಆತಂಕ ತಂದೀತು. ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಇನ್ನೊಬ್ಬರ ಬಗ್ಗೆ ಅಸಹನೆಯನ್ನು ಬಿಟ್ಟುಬಿಡಿರಿ. 

ತುಲಾ ರಾಶಿ:ತುಸು ನಿಧಾನಗತಿಯಲ್ಲಿ ಸಾಗಲಿರುವ ಕಾರ್ಯ ಯೋಜನೆಯು ಕಿರಿಕಿರಿಯೆನಿಸಿದರೂ ಸಮಾಧಾನ ತರಲಿದೆ. ಸ್ಥಗಿತ ಯೋಜನೆಯೊಂದರ ಅನುಷ್ಠಾನಾರ್ಥ ಕಾರ್ಯಚಟುವಟಿಕೆ ಸಫ‌ಲವಾಗಲಿದೆ. ಗೃಹದಲ್ಲಿ ತುಸು ನೆಮ್ಮದಿ, ಶ್ರೇಯಸ್ಸು ಉಂಟಾಗುವುದು. ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ತೋರಿ ಬಂದರೂ ನಿರೀಕ್ಷಿತ ಫ‌ಲ ಲಭಿಸಲಿದೆ. ಕಾರ್ಯ ಕ್ಷೇತ್ರದಲ್ಲಿ ಮನೋದೃಢತೆ, ದಿಟ್ಟತನದ ಪ್ರವೃತ್ತಿಯಿಂದ ಪ್ರಗತಿಯ ಮುನ್ನಡೆಯನ್ನು ಸಾಧಿಸಲಿದ್ದೀರಿ. ಗುರಿಯತ್ತ ನಡೆಯಲು ದೃಢ ಮನಸ್ಸು ಮಾಡಿರಿ. 

ವೃಶ್ಚಿಕ ರಾಶಿ: ಧನಾರ್ಜನೆಯ ವಿಪುಲ ಅವಕಾಶಗಳು ಸದ್ಯದಲ್ಲೇ ತೋರಿ ಬರಲಿವೆ. ಪೂರ್ವನಿಯೋಜಿತ ಕೆಲಸಕಾರ್ಯಗಳ ಮುನ್ನಡೆಗಾಗಿ ನಡೆಸುವ ಪ್ರಯತ್ನಗಳು ಫ‌ಲ ನೀಡಲಿವೆ. ಬಂಧುಮಿತ್ರರ ಸಹಕಾರ ಇಚ್ಛಿತ ಕಾರ್ಯಗಳಿಗೆ ಅನುಕೂಲವಾದೀತು. ಸಾಮಾಜಿಕ ಕೆಲಸಕಾರ್ಯಗಳಿಗಾಗಿ ಒತ್ತಡ ತೋರಿಬರಲಿದೆ. ತುಸು ಕಲಹ ಪ್ರಸಂಗ ಎದುರಾದರೂ ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಹೋಗಲಿವೆ. ಗೃಹಕೃತ್ಯದಲ್ಲಿ ಅಡಚಣೆಗಳು ಮನಸ್ಸಿನ ನೆಮ್ಮದಿ ಕಡಿಮೆ ಮಾಡೀತು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫ‌ಲಿತಾಂಶವಿದೆ. 

ಧನು ರಾಶಿ: ಒತ್ತಡದ ನಡುವೆಯೂ ಕಾರ್ಯನಿರ್ವಹಣೆಯಲ್ಲಿ ಸಫ‌ಲತೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ವಿರೋಧಿಗಳಲ್ಲಿ ಹೊಂದಾಣಿಕೆ ಮಾಡಿಕೊಂಡಲ್ಲಿ ಉತ್ತಮ. ಆರ್ಥಿಕವಾಗಿ ಸಾಲ ಮರುಪಾವತಿಯ ಬಗ್ಗೆ ಒತ್ತಡ ತಂದೀತು. ಸಾಂಸಾರಿಕವಾಗಿ ವಿಶ್ರಾಂತಿಯು ಸುಖಾಪೇಕ್ಷೆಯಾದೀತು. ವ್ಯಾಪಾರ, ವ್ಯವಹಾರಗಳಲ್ಲಿ ಸ್ನೇಹಿತರ ಸಹಾಯಹಸ್ತ ನಿಮಗೆ ನೆರವಾಗಲಿದೆ. ಭೂ, ನಿವೇಶನ, ಗೃಹ ನಿರ್ಮಾಣ ಕಾರ್ಯಗಳು, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಸಕಾಲವಲ್ಲ. ಕಠಿಣ ಪರಿಶ್ರಮ ಹಾಗೂ ಸತತ ಶ್ರಮದಿಂದ ಕಾರ್ಯಸಾಧನೆ ಆದೀತು. 

ಮಕರ ರಾಶಿ: ಅಪೂರ್ವ ಅವಕಾಶವೊಂದು ಎದುರಾಗಲಿರುವ ಸೂಚನೆ ತಂದುಕೊಡಲಿದೆ. ವಿಶಿಷ್ಟ ಕಾರ್ಯವೈಖರಿಯಿಂದ ಆರ್ಥಿಕ ಬಿಕ್ಕಟ್ಟಿ ನಿಂದ ಪಾರಾಗಲಿದ್ದೀರಿ. ಸಾಂಸಾರಿಕ ಸಮಸ್ಯೆಯೊಂದರ ಮೇಲೆ ಹತೋಟಿ ಸಾಧಿಸುವ ಅವಕಾಶ ತಂದೀತು. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲದ ಯೋಗವು ಒದಗಿಬರಲಿದೆ. ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿಮ್ಮ ಕಾರ್ಯ ಸಾಧನೆ ಗುರುತಿಸಲ್ಪಡುತ್ತದೆ. ಧಾರ್ಮಿಕ ಕಾರ್ಯಾಸಕ್ತಿ ತೋರಿ ಬಂದು ಮಾನಸಿಕ ಶಾಂತಿ, ಸಮಾಧಾನ ತಂದುಕೊಟ್ಟಿತು. ಶ್ರೀಗುರುವನ್ನು ಆರಾಧಿಸುವುದು ಮುಖ್ಯವಾಗಿದೆ. 

ಕುಂಭ ರಾಶಿ:ವೃತ್ತಿರಂಗದಲ್ಲಿ ಇತರರೊಂದಿಗೆ ಹೊಂದಾಣಿಕೆ ಅಗತ್ಯವೆನಿಸಲಿದೆ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ ಒದಗಿಬರಲಿದೆ. ದೇಹಾ ರೋಗ್ಯದಲ್ಲಿ ಕೂಡಾ ಸುಧಾರಣೆ ಸಮಾಧಾನ ತರಲಿದೆ. ನಿರೀಕ್ಷೆಯಲ್ಲಿದ್ದ ಅವಕಾಶವೊಂದು ಕೈಗೆ ಬರಲಿದೆ. ಸದುಪಯೋಗಿಸಿ ಕೊಳ್ಳಿರಿ. ಧನಾರ್ಜನೆಯಲ್ಲಿ ವಿವಿಧ ರೀತಿಯ ಸಂಗ್ರಹಯತ್ನದಲ್ಲಿ ಸಫ‌ಲತೆ ತಂದೀತು. ಶತ್ರುಭಯ ನಿವಾರಣೆ, ಉದ್ದೇಶಿತ ಕಾರ್ಯದಲ್ಲಿ ಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯ ವಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಕುಲದೇವತಾ ಸಂದರ್ಶನ ಭಾಗ್ಯ ಒದಗಿಬರಲಿದೆ. 

ಮೀನ ರಾಶಿ: ಶುಭಮಂಗಲ ಕಾರ್ಯಗಳಿಗಾಗಿ ಪ್ರಯಾಣ ಅನಿವಾರ್ಯ ವಾದೀತು. ವೃತ್ತಿರಂಗದಲ್ಲಿ ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭಾಸ ಕಂಡು ಬಂದೀತು. ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ ಇದೆ. ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಸರಕುಗಳ ವಿಕ್ರಯದ ಅವಕಾಶದಿಂದ ಹೆಚ್ಚಿನ ಲಾಭದಾಯಕ ಆದಾಯವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ. ಪ್ರತಿಷ್ಠೆ, ಗೌರವದ ಕಾರಣವಾಗಿ ಕೆಲವೊಂದು ಖರ್ಚು-ವೆಚ್ಚಗಳು ಅನಿವಾರ್ಯವಾಗಿ ಬಂದಾವು. 

ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

Leave a Reply

Your email address will not be published. Required fields are marked *

error: Content is protected !!