ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಏ.1 ರಿಂದ ಮತ್ತೊಂದು ಶಾಕ್!?

ಉಡುಪಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಪ್ರಿಲ್ 1 ರಿಂದ ಟೋಲ್ ಶುಲ್ಕ 5% ಏರಿಕೆ ಆಗಲಿದೆಯಂತೆ. ಹೀಗೊಂದು ಸುದ್ಧಿ ಮಧ್ಯಮದಲ್ಲಿ ವರದಿಯಾಗಿದೆ. ಅಂದಹಾಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸುಂಕ ಹೆಚ್ಚಿಸುವುದು ವಾರ್ಷಿಕವಾಗಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ.

ಅದರಂತೆ  ಪ್ರತಿ ಆರ್ಥಿಕ ವರ್ಷಕ್ಕೊಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಶುಲ್ಕವನ್ನು ಏರಿಕೆ ಮಾಡುತ್ತದೆ. ಆದ್ದರಿಂದ ವಾಡಿಕೆಯಂತೆ ಈ ಭಾರಿ ಏ.1 ರಿಂದ ಟೋಲ್ ಶುಲ್ಕ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಅಲ್ಲದೆ ಟೋಲ್ ಸುಂಕ್ 5 ಶೇ. ಹೆಚ್ಚಳದ ಜೊತೆಗೆ, ಮಾಸಿಕ ಪಾಸ್ ದರವು 25-30 ರೂಪಾಯಿ ಏರಿಕೆಯಾಗಲಿದೆ ಎನ್ನಲಾಗಿದೆ.

ಇನ್ನು ದರ ಏರಿಕೆಯ ಶಿಫಾರಸು ಎನ್ ಎಚ್ ಎ ಐ ಮುಂದಿದ್ದು, ಅದು ಅಸ್ತು ಎಂದರೆ ಎ.1 ರಿಂದ ದರ ಏರಿಕೆ ಖಚಿತವೆಂದೇ ಹೇಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!