ಕೋಟದ ಅಮೃತೇಶ್ವರಿ ದೇವಸ್ಥಾನದಲ್ಲಿ ತುಲಾಭಾರ ಸೇವೆ ನೀಡಿದ ಮುಸ್ಲಿಂ ಕುಟುಂಬ!
ಉಡುಪಿ: ದೇವನೊಬ್ಬನೇ ನಾಮ ಹಲವು ಎಂಬ ಮಾತೊಂದಿದೆ. ಇತ್ತೀಚಿನ ಕೆಲವು ಘಟನೆಗಳು ಈ ಮಾತು ಅಕ್ಷರಸಹ ಸತ್ಯ ಎನ್ನುವುದನ್ನು ಸಾಬೀತು ಮಾಡುತ್ತಿವೆ. ಇತ್ತೀಚೆಗೆ ನಡೆದ ಕೊರಗಜ್ಜನ ನೇಮೋತ್ಸವದಲ್ಲಿ ಕೊರಗಜ್ಜ ಮುಸ್ಲಿಂ ಯುವಕನ್ನು ಎತ್ತಿ ಅಭಯ ನೀಡಿದ್ದು ನಮಗೆಲ್ಲಾ ಗೊತ್ತಿರೊ ವಿಚಾರನೇ. ಅದೇ ರೀತಿ ಮತ್ತೊಂದೆಡೆ ಮುಸ್ಲಿಂ ಕುಟುಂಬವೊಂದು ದೇವಸ್ಥಾನದಲ್ಲಿ ತುಲಾಭಾರ ಸೇವೆ ನೀಡಿರುವ ಘಟನೆ ಮತ್ತೊಮ್ಮೆ ಧರ್ಮ ಸೌಹಾರ್ಧತೆಗೆ ಸಾಕ್ಷಿಯಾಗಿದೆ. ಉಡುಪಿ ಜಿಲ್ಲೆಯ ಕೋಟದ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬವೊಂದು ಹರಕೆ ಸಲುವಾಗಿ ತುಲಾಭಾರ ಸೇವೆ ಸಲ್ಲಿಸಿದೆ.
ಈ ಭಾಗದ ಶಕ್ತಿ ಕ್ಷೇತ್ರವಾಗಿರುವ ಕೋಟದ ಅಮೃತೇಶ್ವರಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅದರಂತೆ ಈ ಕುಟುಂಬವು ತಾವು ಹೊತ್ತಿದ್ದ ಹರಕೆ ಸಲ್ಲಿಸುವ ಸಲುವಾಗಿ ಈ ತುಲಾಭಾರ ಸೇವೆ ನೀಡಿದೆ. ಧರ್ಮ ಸಾಮರಸ್ಯವನ್ನು ಸಾರುವ ಇಂತಹ ಘಟನೆಗಳು ನಮ್ಮ ಸುತ್ತ ಮುತ್ತ ನಡೆಯುವಾಗ ಅದನ್ನು ಧನಾತ್ಮಕ ಚಿಂತನೆ ಮೂಲಕ ಸ್ವಾಗತಿಸುವುದು ಸೌಹಾರ್ಧತೆಯನ್ನು ಹೆಚ್ಚಿಸುತ್ತದೆ.