ಕಂಬಳ ಕ್ರೀಡೆ ಪ್ರೋತ್ಸಾಯಿಸಲು ಸರಕಾರ ರೂ.1ಕೋಟಿ ಸಹಾಯಧನ ಬಿಡುಗಡೆ

ಉಡುಪಿ: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳವನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನುದಾನ ನೀಡಿದೆ. ಅದರಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿರುವ ಸರಕಾರ ಕಂಬಳ ಕ್ರೀಡೆಯನ್ನು ಪ್ರೋತ್ಸಾಯಿಸಲು ಸರಕಾರ ಒಂದು ಕೋಟಿ ರೂ. ಸಹಾಯಧನ ನೀಡಲು ಆದೇಶಿಸಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕಂಬಳಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಅದರಂತೆ ಜಾನಪದ ಕ್ರೀಡೆಯಾದ ಕಂಬಳವನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಕಂಬಳವನ್ನು ನಡೆಸಲು ರೂ.5.00 ಲಕ್ಷಗಳಂತೆ ರೂ.50.00 ಲಕ್ಷಗಳನ್ನು ಮತ್ತು ಉಡುಪಿ ಜಿಲ್ಲೆಯಲ್ಲಿ 10 ಕಂಬಳ ನಡೆಸಲು ರೂ.5.00 ಲಕ್ಷಗಳಂತೆ ರೂ.50.00 ಲಕ್ಷಗಳನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲು ಒಟ್ಟು ರೂ.100.00 ಲಕ್ಷ ಗಳನ್ನು ಕರ್ನಾಟಕ ರಾಜ್ಯ ಪುವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಬಿಡುಗಡೆ ಮಾಡಲು ಮಂಜೂರಾತಿ ನೀಡಿದ್ದಾರೆ  ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.

ಇನ್ನು ಈ ಅನುದಾನವನ್ನು ಕೆಲವೊಂದು ಷರತ್ತಿನ ಆಧಾರದ ಮೇಲೆ ಮಂಜೂರು ಮಾಡಿದು ಆ ಷರತ್ತುಗಳು ಹೀಗಿವೆ.
1, ಯಾವ ಉದ್ದೇಶಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆಯೋ, ಅದೇ ಉದ್ದೇಶಕ್ಕೆ ಅನುದಾನ ಬಳಸಿಕೊಳ್ಳತಕ್ಕದ್ದು,
2 ಮಂಜೂರು ಮಾಡಿದ ಅನುದಾನವನ್ನು ಸಮರ್ಪಕವಾಗಿ ಹಾಗೂ ಸಂಪೂರ್ಣವಾಗಿ ವಿನಿಯೋಗಿಸಿದಕ್ಕೆ, ಹಣ ಬಳಕೆ ಪ್ರಮಾಣ ಪತ್ರವನ್ನು ಮತ್ತು ಲೆಕ್ಕಪರಿಶೋಧಕರಿಂದ ಲೆಕ್ಕವಟ್ಟಿಯನ್ನು ಪಡೆಯತಕ್ಕದು.
3. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕೆಂಬಳವನ್ನು ಆಯ್ಕೆ ಮಾಡತಕ್ಕದ್ದು.
4. ಆಯೋಜಿಸಲಾಗುವ ಕಂಬಳವು ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತಿರಬೇಕು.
5. ಕಂಬಳವನ್ನು ಒಂದು ತಂಡದಿಂದ ಆಯೋಜಿಸಬೇಕು. ಈ ತಂಡವು ಒಂದೇ ಕುಟಂಬಕ್ಕೆ ಸೇರಿದಂತಿರಬಾರದು.

Leave a Reply

Your email address will not be published. Required fields are marked *

error: Content is protected !!