1ರಿಂದ 9 ನೇ ತರಗತಿಯವರೆಗಿನ ಎಲ್ಲಾ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್!
ಪುದುಚೇರಿ: ಇಲ್ಲಿನ ಶಾಲೆಯ 1 ರಿಂದ 9 ನೇ ತರಗತಿಯವರೆಗಿನ ಎಲ್ಲಾ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್ ಎಂದು ಘೋಷಿಸುವ ಪ್ರಸ್ತಾವನೆಗೆ ಕೇಂದ್ರಾಡಳಿತ ಪ್ರದೇಶದ ಪುದುಚೇರಿಯ ನೂತನ ರಾಜ್ಯಪಾಲರಾದ ತಮಿಳಿಸಾಯಿ ಸೌಂದರ್ರಾಜನ್ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳು ಮಾರ್ಚ್ 31 ರವರೆಗೆ ಮಾತ್ರ ಕಾರ್ಯ ನಿರ್ವಹಿಸಲಿವೆ.
1ರಿಂದ 9ನೇ ತರಗತಿಗಳಿಗೆ ವಾರದಲ್ಲಿ ಐದು ದಿನಗಳವರೆಗೆ ಕ್ಲಾಸ್ ನಡೆಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ರಜಾ ದಿನವಾಗಿದೆ. ಏಪ್ರಿಲ್ 1 ರಿಂದ ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭವಾಗಲಿದೆ. ಆಯಾ ರಾಜ್ಯ ಶಿಕ್ಷಣ ಮಂಡಳಿಗಳ ಪರೀಕ್ಷೆಗಳ ವೇಳಾಪಟ್ಟಿಯ ಪ್ರಕಾರ 10, 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಪುದುಚೇರಿ ಮತ್ತು ಕಾರೈಕಲ್ ಪ್ರಾಂತ್ಯದಲ್ಲಿ 10 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ತಮಿಳುನಾಡು ಸ್ಟೇಟ್ ಬೋರ್ಡ್ ಆಫ್ ಎಜುಕೇಷನ್ ಬೋರ್ಡ್ ಎಲ್ಲರೂ ಪಾಸ್ ಎಂದು ಆದೇಶವನ್ನು ಹೊರಡಿಸಿದೆ. ಮಾಹೆ ಮತ್ತು ಯಮನ್ ಪ್ರಾಂತ್ಯದಲ್ಲೂ ಸಹ ಬೋಡ್ರ್ಸ್ ಆಫ್ ಎಜುಕೇಷನ್ ಕೇರಳ ಮತ್ತು ಆಂಧ್ರಪ್ರದೇಶ ಕೂಡ ವಿದ್ಯಾರ್ಥಿಗಳು ಪಾಸ್ ಎಂದು ಅದೇಶವನ್ನು ಹೊರಡಿಸಿವೆ.