ಶಿವ-ವಿಷ್ಣು ನಡುವೆ ಭೇದ ಸೃಷ್ಟಿಸಿ ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಹುನ್ನಾರ: ಕೇಮಾರುಶ್ರೀ

ಉಡುಪಿ: ಮಣಿಪಾಲ ಮಂಚಕೆರೆಯ ವಾಸುಕೀ ನಾಗಯಕ್ಷಿ ಸನ್ನಿಧಾನ ಟ್ರಸ್ಟ್ ವತಿಯಿಂದ ಪರಿವರ್ತನಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಮಂಚಿಕೆರೆ ಅಲೆವೂರು ರಸ್ತೆಯಲ್ಲಿರುವ ವಾಸುಕೀ ನಾಗಯಕ್ಷಿ ಸನ್ನಿಧಾನದಲ್ಲಿ ಮಹಾ ಶಿವರಾತ್ರಿ ಸಂಭ್ರಮ 20201 ಕಾರ್ಯಕ್ರಮ ನಡೆಯಿತು.

ನಿನ್ನೆ ಸಂಜೆ ನಡೆದ ಭಕ್ತಿ ಪೂರ್ವಕ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಆಶಿರ್ವಚನ ನೀಡಿ ಮಾತನಾಡಿದ ಅವರು, ಚರಿತ್ರೆಯಲ್ಲಿ ಎಲ್ಲೂ ಶಿವ ಮತ್ತು ವಿಷ್ಣು ನಡುವೆ ಭೇದಭಾವವಿಲ್ಲ ಆದರೆ, ಏನೂ ಆಧ್ಯಾತ್ಮ ತಿಳಿಯದ ಕೆಲವೊಂದು ಜನ ಶಿವ-ವಿಷ್ಣು ನಡುವೆ ಭೇದ ಸೃಷ್ಟಿಸಿ ವಿಷ ಬೀಜ ಬಿತ್ತುವ ಮೂಲಕ ಹಿಂದೂ ಸಮಾಜದ ಒಗ್ಗಟ್ಟು ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ, ಆದವೂದಕ್ಕೂ ಭಕ್ತರು ಆಸ್ಪದ ಕೊಡಬಾರದು ಎಂದರು.

ಈಗಾಗಲೇ ಹಲವರು ಕೊರೋನಾದಿಂದಾಗಿ ಸಂಕಷ್ಟದಲ್ಲಿದ್ದಾರೆ. ಅವಧಿಯಲ್ಲಿ ಮತ್ತಷ್ಟು ಸಂಕಷ್ಟ ಕೊಡುವ ಕೆಲವ ಹಲವು ಕಡೆಗಳಲ್ಲಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಂದು ಎಲ್ಲಾ ಕ್ಷೇತ್ರದಲ್ಲೂ ಸಾಮಾಜಿಕ ಧಾರ್ಮಿಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ನಾವೆಲ್ಲಾ ಭ್ರಷ್ಟಾಚಾರದ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ. ಇಂದಿನ ಇಂಟರ್‍ನೆಟ್ ಯುಗದಲ್ಲಿ ಮಕ್ಕಳು ಎಡ್ವಾನ್ಸ್ಡ್ ಆಗಿ ಬೆಳೆಯುತ್ತಿದ್ದಾರೆ. ಮಾಧ್ಯಮಗಳಲ್ಲಿ ನಮ್ಮ ಸಂಸ್ಕøತಿಯನ್ನು ಹಾಳು ಮಾಡುವ ದೃಶ್ಯಗಳನ್ನೊಳಗೊಂಡ ಕಾರ್ಯಕ್ರಗಳು ಪ್ರಸಾರವಾಗುತ್ತಿದೆ. ಆದ್ದರಿಂದ ಮಕ್ಕಳು ಸಮಾಜದಲ್ಲಿ ಉತ್ತಮವಾದೂದನ್ನೇ ಮೈಗೂಡಿಸುವಂತಹ ಉತ್ತಮ ಸಂಸ್ಕøತಿ ಸಂಸ್ಕಾರವನ್ನು ಮಕ್ಕಳಿಗೆ ನೀಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಲೆವೂರಿನ ವೇ| ಮೂ| ಮೋಹನ ತಂತ್ರಿಗಳು ಆಶಿರ್ವಚನ ನೀಡಿದರು. ಈ ವೇಳೆ ಟ್ರಸ್ಟ್ ಅಧ್ಯಕ್ಷ ಕೆ. ಶಾಂತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ  ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಬಿಜೆಪಿ ಕಾಪು ಕ್ಷೇತ್ರದ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉದ್ಯಮಿ ಶ್ರೀಕಾಂತ್ ರಾವ್, 80 ಬಡಗಬೆಟ್ಟು ಗ್ರಾ. ಪಂ.ಅಧ್ಯಕ್ಷೆ ಮಾಧವಿ, ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಗ್ರಾ.ಪಂ. ಮಾಜಿ ಸದಸ್ಯ ಅಶೋಕ್ ಕುಮಾರ್ ಅಲೆವೂರು, ಪರಿವರ್ತನಾ ಫೌಂಡೇಶನ್ ಅಧ್ಯಕ್ಷ ಮೋಹನ್ ಭಟ್, ಪರಿವರ್ತನ ಫೌಂಡೇಶನ್‍ನ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ಶ್ರೀನಿವಾಸ ವೈದ್ಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!