ಉಡುಪಿ: ನಡುರಸ್ತೆಯಲ್ಲೇ ಪೌರಕಾರ್ಮಿಕರಿಗೆ ಹಲ್ಲೆ ಮಾಡಿದ ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕ

ಉಡುಪಿ: (ಉಡುಪಿ ಟೈಮ್ಸ್ ವರದಿ)ಸ್ವಚ್ಛ ಭಾರತ ಪರಿಕಲ್ಪನೆ ಬಂದ ಬಳಿಕ ನಗರವನ್ನು ಸ್ವಚ್ಚಗೊಳಿಸುವ ಸಲುವಾಗಿ ವ್ಯವಸ್ಥಿತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಪ್ರತೀ ಅಂಗಡಿ, ಮನೆಗಳಿಗೆ ಹಸಿ ಕಸ, ಒಣ ಕಸ ಎಂದು ವಿಂಗಡಿಸಿ ನೀಡುವಂತೆ ನಗರ ಸಭೆ ಅನೇಕ ಬಾರಿ ಮನವಿ ಮಾಡಿಕೊಂಡಿದೆ ಅದಕ್ಕಾಗಿ ಅನೇಕ ಕಡೆ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಆದರೂ ನಮ್ಮಲ್ಲಿರುವ ಹಣದ ಮದದಿಂದ ಇಂತಹ ನಿಯಮಗಳನ್ನು ಗಾಳಿಗೆ ತೂರಿ ದರ್ಪದ ವರ್ತನೆ ತೋರುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ದುರಂಹಕಾರದಿಂದ ವರ್ತಿಸುತ್ತಾರೆ.

ಹೌದು ನಾಗರಿಕರು ಎನಿಸಿಕೊಂಡಿರುವ ನಾವು ನಮ್ಮ ನಿತ್ಯದ ಕೆಲಸದಲ್ಲಿ  ಉಂಟಾಗುವ ಮನೆಯ ಕಸ, ತ್ಯಾಜ್ಯಗಳನ್ನು ದಿನ ನಿತ್ಯ ಸ್ವಚ್ಛಗೊಳಿಸುವ ಕಾರ್ಮಿಕರೆಂದರೆ ಅದೇನೋ ನಿರ್ಲಕ್ಷ್ಯ , ಅಸಡ್ಡೆ ಭಾವನೆ, ತಿರಸ್ಕಾರದ ಭಾವನೆ. ಕಸ ತೆಗೆಯುತ್ತಾರೆ ಎಂದ ಮಾತ್ರಕ್ಕೆ ಅವರನ್ನು ಕಸದಂತೆ ಕಾಣುವ ವ್ಯಕ್ತಿಗಳು ಇರುವುದು ನಮ್ಮ ದುರಾದೃಷ್ಟ.

ಹೌದು ಇಂತಹ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ಇಂದು ನಗರ ಸಭೆಯ ಸಿಬ್ಬಂದಿಗಳು ಕಸ ತೆಗೆಯುವ ಸಲುವಾಗಿ ಉಡುಪಿಯ ಸಿಟಿ ಬಸ್ ನಿಲ್ದಾಣ ಬಳಿ ಎಲೆಕ್ಟ್ರಾನಿಕ್ಸ್ ಅಂಗಡಿಗೆ ತೆರಳಿದ್ದಾರೆ. ಈ ವೇಳೆ ಕಸ ವಿಲೇವಾರಿಗೆಂದು ಈ ಹಿಂದೆ ಸೂಚಿಸಿದಂತೆ ಹಸಿಕಸ ಮತ್ತು ಒಣ ಕಸ ವನ್ನು ವಿಂಗಡಣೆ ಮಾಡದೇ ಎರಡೂ ಕಸವನ್ನು ಒಟ್ಟಿಗೆ ಹಾಕಿರುವುದು ಕಂಡು ಬಂದಿದೆ. ಈ ವೇಳೆ ಕಾರ್ಮಿಕರು ಕಸವನ್ನು ವಿಂಗಡಿಸಿ ಕೊಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ಅಂಗಡಿಯ ಸಿಬ್ಬಂದಿಗಳು ಕೋಪಗೊಂಡು ಈ ಕಸವನ್ನು ನಿನಗೆ ಕೊಂಡೋಗಲು ಏನಾಗುತ್ತದೆ ಎಂದು ಬೈದಿದ್ದು ಮಾತ್ರವಲ್ಲದೆ ಹಲ್ಲೆ ಮಾಡಿದ್ದಾರೆ.

ಈ ವೇಳೆ ಕಾರ್ಮಿಕರು ಕಸ ವಿಲೇವಾರಿ ವಾಹನವನ್ನು ಅಂಗಡಿ ಮುಂದೆ ಇರಿಸಿದ್ದರು. ಬಳಿಕ ನಗರ ಸಭೆಯ ಅಧಿಕಾರಿ ಬಂದು ಮಾತನಾಡಿದ್ದು, ಈ ವೇಳೆ ಅಧಿಕಾರಿಗಳೊಂದಿಗೆ ಕೂಡಾ ಅಂಗಡಿ ಸಿಬ್ಬಂದಿಗಳು ದರ್ಪದಿಂದ ವರ್ತಿಸಿದ್ದು ಮಾತ್ರವಲ್ಲದೆ ಅಧಿಕಾರಿಗಳ ಎದುರಲ್ಲೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಅಲ್ಲದೆ ಬೇಕಾದರೆ ಕೇಸು ದಾಖಲಿಸಿ ಏನಾಗುತ್ತದೆಂದು ನಾವು ನೋಡಿಕೊಳ್ಳುತ್ತೇವೆ ಎಂದು ದುರಹಂಕಾರದಿಂದ ವರ್ತಿಸಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು.

ಕೆಲಸ ಯಾವುದೇ ಆದರೂ ಅದಕ್ಕೊಂದು ಅದರದ್ದೇ ಆದ ಮಹತ್ವವಿದೆ. ಅದೂ ಎಸಿ ಕ್ಯಾಬಿನ್‍ನಲ್ಲಿ ಕುಳಿತು ಮಾಡುವ ಕೆಲಸ ವಿರಬಹುದು ಅಥವಾ ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರಾಗಿರಬಹುದು. ನಾವು ದಿನಾ ನಡೆಯುವ ಸ್ಥಳದಲ್ಲಿ ಸ್ವಲ್ಪ ಕಸದ ರಾಶಿ ಬಿದ್ದಿದ್ದರೆ ಸಾಕು ಆದಷ್ಟು ಆ ಜಾಗದಿಂದ ಅಂತರ ಕಾಯ್ದುಕೊಂಡು ನಡೆಯುತ್ತೇವೆ. ಹೀಗಿರುವಾಗ ನಮ್ಮ ಮನೆಯ ನಮ್ಮ ಅಂಗಡಿಯ ಕಸಗಳನ್ನು ವಿಲೇವಾರಿ ಮಾಡುವ ಅವರು ಇಡೀ ದಿನ ಆ ತ್ಯಾಜ್ಯಗಳ ಜೊತೆಗೆ ಇರುತ್ತಾರೆ ಎಂದರೆ ನಾವು ಅವರ ಕಾರ್ಯಕ್ಕೆ ಗೌರವಿಸಲೇ ಬೇಕು. 

1 thought on “ಉಡುಪಿ: ನಡುರಸ್ತೆಯಲ್ಲೇ ಪೌರಕಾರ್ಮಿಕರಿಗೆ ಹಲ್ಲೆ ಮಾಡಿದ ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕ

Leave a Reply

Your email address will not be published. Required fields are marked *

error: Content is protected !!