ಉಡುಪಿ: ಜ್ಯೋತಿಷ್ಯ ಹೇಳಿ ರೂ.7.5 ಲಕ್ಷದ ಚಿನ್ನಾಭರಣ, ನಗದು ದೋಚಿದ ಮಹಿಳೆ
ಉಡುಪಿ: ಜ್ಯೋತಿಷ್ಯ ಹೇಳುವ ನೆಪದಲ್ಲಿ ಮನೆಗೆ ಬಂದ ಅಪರಿಚಿತ ಮಹಿಳೆಯೊಬ್ಬರು ನಗ ನಗದು ದೋಚಿ ಪರಾರಿಯಾಗಿರುವ ಘಟನೆ ಉಡುಪಿಯ ನಿಟ್ಟೂರಿನಲ್ಲಿ ನಡೆದಿದೆ.
ಮಾ.5 ರಂದು ನಿಟ್ಟೂರಿನ ಲಕ್ಷ್ಮೀ ಎಂಬವರ ಮನೆಗೆ ಜ್ಯೋತಿಷಿ ಹೇಳುವ ನೆಪದಲ್ಲಿ ಮನೆಗೆ ಅಪರಿಚಿತ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ಆ ಮಹಿಳೆ, ಜೋತಿಷ್ಯ ಹೇಳುವುದಾಗಿ ನಂಬಿಸಿ ನಿಮ್ಮ ಮನೆಯಲ್ಲಿ ಯಾರೊ ಮಾಟ ಮಂತ್ರ ಮಾಡಿದ್ದಾರೆ ಕಣ್ಣು ದೃಷ್ಟಿ ಆಗಿದೆ ಲಕ್ಷ್ಮಿ ಪೂಜೆ ಮಾಡಿಸುತ್ತೇನೆ ಎಂದಿದ್ದಳು.
ಇದರ ಜೊತೆಗೆ ಪೂಜೆ ಸಲುವಾಗಿ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ತನ್ನಿ ಎಂಬುದಾಗಿ ತಿಳಿಸಿದ್ದಾಳೆ. ಅದರಂತೆ ಲಕ್ಷ್ಮಿ ರವರು ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣಗಳನ್ನು ಮತ್ತು 15,000 ರೂಪಾಯಿ ಹಣವನ್ನು ಬಾಕ್ಸ್ನಲ್ಲಿ ಹಾಕಿ ಕೊಟ್ಟಿದ್ದಾರೆ. ಅಪರಿಚಿತ ಮಹಿಳೆ ಪೂಜೆ ಮುಗಿಸಿ ಹೋದ ಬಳಿಕ ಲಕ್ಷ್ಮಿ ಅವರು ಬಾಕ್ಸ್ ತೆಗೆದು ನೋ ಡಿದ್ದು ಆಗ, ಚಿನ್ನಾಭರಣಗಳು ಮತ್ತು ನಗದು ಹಣ ಬಾಕ್ಸ್ ನಲ್ಲಿ ಇರುವುದಿಲ್ಲ.
ಈ ಸಂದರ್ಭ ಅಪರಿಚಿತ ಮಹಿಳೆ ನಂಬಿಸಿ ರೂ.7.5 ಲಕ್ಷ ಮೌಲ್ಯದ ನಗ ನಗದು ದೋಚಿ ಪರಾರಿಯಾಗಿರುವ ಸಂಗತಿ ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.