ಕುಂದಾಪುರ: ಎಲೆಕ್ಟ್ರಿಶನ್ ನಾಪತ್ತೆ

ಕುಂದಾಪುರ: ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಶಿವಮೊಗ್ಗದ ನಾಗಪ್ಪ ಅವರ ಮಗ ವಿಘ್ನೇಶ್ವರ (20) ನಾಪತ್ತೆಯಾದ ಯುವಕ.

ಈತ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಸಹನಾ ಹಾಲ್ ನಲ್ಲಿ ಲೈಂಟಿಂಗ್ಸ್ ಹಾಗೂ ಸೌಂಡ್ಸ್ ಕೆಲಸ ಮಾಡಿಕೊಂಡಿದ್ದು, ಅಲ್ಲೇ ಹಾಲ್ ನ ರೂಂ ನಲ್ಲಿ ಉಳಿದುಕೊಂಡಿದ್ದ. ಮಾ.1 ರಂದು ಹಾಲ್‍ನ ಮಾಲೀಕರಾದ ಸುರೇಂದ್ರ ಶೆಟ್ಟಿಯವರು ನಾಗಪ್ಪ ಅವರಿಗೆ ಕರೆ ಮಾಡಿ ವಿಘ್ನೇಶ್ವರ ಬಂದಿರುವ ಬಗ್ಗೆ ಖಾತರಿ ಪಡಿಸಲು ವಿಚಾರಿಸಿದ್ದು, ಈ ವೇಳೆ ವಿಘ್ನೇಶ್ವರ  ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!