ಜಡ್ಜ್’ಗೆ ಹುಟ್ಟು ಹಬ್ಬ ಶುಭಾಶಯ ತಿಳಿಸಿದ ವಕೀಲ ಅಂದರ್!

ಮಧ್ಯ ಪ್ರದೇಶ: ಜಡ್ಜ್ ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ವಕೀಲರೊಬ್ಬರು ಜೈಲು ಸೇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.  ಮಧ್ಯ ಪ್ರದೇಶದ ರತ್ನಂನ ವಕೀಲ ವಿಜಯ್ ಸಿಂಗ್ ಯಾದವ್ (37) ಪ್ರಕರಣದಲ್ಲಿ ಜೈಲು ಸೇರಿರುವ ವಕೀಲ.

ಇಲ್ಲಿನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಜೆಎಂಎಫ್‍ಸಿ) ಅವರಿಗೆ ಅಸಭ್ಯವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ ಆರೋಪದ ಮೇಲೆ ವಕೀಲ ವಿಜಯ್ ಸಿಂಗ್ ಯಾದವ್  ವಿರುದ್ಧ ಐಟಿ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಕೇಸು ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಕೀಲ ಜನವರಿ 28 ರಂದು ಮುಂಜಾನೆ 1.11 ಕ್ಕೆ, ಜಡ್ಜ್ ಅವರ ಅನುಮತಿ ಇಲ್ಲದೆ ಅವರ ಫೇಸ್‍ಬುಕ್ ಖಾತೆಯಿಂದ  ಪ್ರೋಫೈಲ್ ಚಿತ್ರವನ್ನು ಡೌನ್‍ಲೋಡ್ ಮಾಡಿಕೊಂಡು ಶುಭಾಶಯದ ಭಾಗವಾಗಿ ಇ-ಮೇಲ್ ಮೂಲಕ  “ಅಸಭ್ಯ ಸಂದೇಶ” ದೊಂದಿಗೆ ಕಳುಹಿಸಿದ್ದಾನೆ. ಇನ್ನು ಮೇಲ್ ಹೊರತುಪಡಿಸಿ, ಯಾದವ್ ಅವರು ಜೆಎಂಎಫ್‍ಸಿಗೆ ಸ್ಪೀಡ್ ಪೋಸ್ಟ್ ಮೂಲಕ ಶುಭಾಶಯ ಪತ್ರವನ್ನು ಕಳುಹಿಸಿದ್ದಾರೆ ಎಂದು ದೂರಿನ ಎಫ್ ಐಆರ್ ನಲ್ಲಿ  ತಿಳಿಸಲಾಗಿದೆ.

ರತ್ನಂ ಜಿಲ್ಲಾ ನ್ಯಾಯಾಲಯದ ಸಿಸ್ಟಮ್ ಆಫೀಸರ್ ಮಹೇಂದ್ರ ಸಿಂಗ್ ಚೌಹಾನ್ ಅವರ ದೂರಿನ ಆಧಾರದ ಮೇಲೆ ಫೆ. 8 ರಂದು ಸ್ಟೇಷನ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!