ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಮುನ್ನಡೆ

ಅಹ್ಮದಾಬಾದ್: ಗುಜರಾತ್ ನಲ್ಲಿ 6 ಪುರಸಭೆ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 

576 ಸ್ಥಾನಗಳ ಪೈಕಿ 40 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಚುನಾವಣಾ ಆಯೋಗದ ಇತ್ತೀಚಿನ ವರದಿ ಮೂಲಕ ತಿಳಿದುಬಂದಿದೆ.
 
ಕಾಂಗ್ರೆಸ್ ಪಕ್ಷ ಈ ವರೆಗೂ 9 ಸ್ಥಾನಗಳಲ್ಲಿ ಗೆದ್ದಿದೆ. ಅಹ್ಮದಾಬಾದ್, ಸೂರತ್, ರಾಜ್ ಕೋಟ್, ವಡೋದರಾ, ಭವ್ ನಗರ್ ಜಾಮ್ ನಗರ್ ಗಳಲ್ಲಿನ 144 ವಾರ್ಡ್ ಗಳ 576 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು.

ಈ ಸ್ಥಳೀಯ ಸಂಸ್ಥೆಗಳಲ್ಲಿ ಹಲವು ಅವಧಿಗಳಿಂದ ಬಿಜೆಪಿ ಆಡಳಿತವೇ ಇದೆ. ಅಹ್ಮದಾಬಾದ್ ನಲ್ಲಿ 5 ಸ್ಥಾನಗಳು, ರಾಜ್ ಕೋಟ್ ನಲ್ಲಿ 8, ಸೂರತ್ ನಲ್ಲಿ 4 ವಡೋದರಾದಲ್ಲಿ 9 ಜಾಮ್ ನಗರ ಹಾಗೂ ಭವ್ ನಗರದಲ್ಲಿ 7 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. 

ಕಾಂಗ್ರೆಸ್ ವಡೋದರಾ, ಭವ್ ನಗರ್, ಜಾಮ್ ನಗರಗಳಲ್ಲಿ ತಲಾ ಒಂದು ಸ್ಥಾನ ಸೇರಿ ಈ ವರೆಗೂ 7 ಸ್ಥಾನಗಳಲ್ಲಿ ಗೆದ್ದಿದೆ. ಭಾನುವಾರ ನಡೆದ ಚುನಾವಣೆಯಲ್ಲಿ ಶೇ.46.1 ರಷ್ಟು ಮತದಾನ ನಡೆದಿತ್ತು. 

Leave a Reply

Your email address will not be published. Required fields are marked *

error: Content is protected !!