ಪಿಟಿ ಉಷಾ ಬಿಜೆಪಿ ಸೇರ್ಪಡೆ?

ತಿರುವನಂತಪುರಂ: ದೇಶದ ಜನಪ್ರಿಯ ವ್ಯಕ್ತಿಗಳು ಬಿಜೆಪಿ ಪಾಳಯಕ್ಕೆ ಧುಮುಕುತ್ತಿವುದು ಇತ್ತೀಚಿನ ಬೆಳವಣಿಗೆಯಲ್ಲಿ ಒಂದಾಗಿದೆ. ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದ ಅಣ್ಣಾ ಮಲೈ ಅವರು ತಮಿಳುನಾಡಿನಲ್ಲಿ ಬಿಜೆಪಿ ಸೇರಿದರೆ, ಇತ್ತ ಮೆಟ್ರೋ ಮಾನವ ಇ. ಶ್ರೀಧರನ್ ಬಿಜೆಪಿ ಸೇರಿದ್ದಾರೆ. ಇದೀಗ ಈ ಸಾಲಿನಲ್ಲಿ ಮತ್ತೊಂದು ಹೆಸರು ಕೇಳಿ ಬರುತ್ತಿದೆ.

ಹೌದು… ಮುಂದಿನ ದಿನಗಳಲ್ಲಿ ಒಲಿಂಪಿಯನ್  ಪಿಟಿ ಉಷಾ ಅವರು ಬಿಜೆಪಿ ಸೇರ್ಪಡೆ ಗೊಳ್ಳಲಿದ್ದಾರ..? ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ  ವರದಿಯಾಗಿದೆ. ಇದಕ್ಕೆ ಕಾರಣ ಪಿಟಿ ಉಷಾ ಅವರ ಇತ್ತೀಚಿನ ಟ್ವೀಟ್‍ಗಳು. ಕೃಷಿ ಸುಧಾರಣಾ ಕಾನೂನುಗಳ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಟ್ಟ ಪಿ.ಟಿ. ಉಷಾರವರು, ಪರಿಸರ ಕಾರ್ಯಕರ್ತೆ ಎನ್ನಲಾಗುವ ಗ್ರೇಟಾ ಥನ್‍ಬರ್ಗ್ ಹಾಗೂ ಗಾಯಕಿ ರಿಯನ್ನಾರ ಇತ್ತೀಚಿನ ಹೇಳಿಕೆಗಳನ್ನು ಕಟುವಾಗಿ ವಿರೋಧಿಸಿದ ಮಂದಿಯಲ್ಲಿ ಒಬ್ಬರಾದ ಉಷಾ, “ನಮ್ಮ ಸಂಸ್ಕøತಿ ಹಾಗೂ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಇದ್ದು, ನಮ್ಮದು ನಿಜವಾದ ಪ್ರಜಾಪ್ರಭುತ್ವವಾಗಿದೆ.

ನಮ್ಮ ಆಂತರಿಕ ವಿಷಯಗಳಲ್ಲಿ ತಲೆ ಹಾಕಬೇಡಿ. ನಮ್ಮ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ನಮಗೆ ಗೊತ್ತಿದ್ದು, ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯುತ್ತಿರುವ ದೇಶ ನಮ್ಮದಾಗಿದೆ ಎಂದು ಟ್ವೀಟ್ ಮಾಡಿದ್ದರು. ಇದೀಗ ಈ ಟ್ವೀಟ್‍ಗಳು ಆಕೆ ಬಿಜೆಪಿ ಪಾಳಯದತ್ತ ವಾಲುತ್ತಿರುವಂತೆ ತೋರುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಪಿ.ಟಿ. ಉಷಾರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನದಲ್ಲಿದೆ ಎಂಬ ಸುದ್ದಿಗಳೂ ಹರಿದಾಡುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಒಲಿಂಪಿಯನ್ ಪಿಟಿ ಉಷಾ ಅವರು ಬಿಜೆಪಿ ಸೇರಲಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ ಎಂದು ವರದಿಯಾಗಿದೆ. 

Leave a Reply

Your email address will not be published. Required fields are marked *

error: Content is protected !!