ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್: 2 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ

ಉಡುಪಿ: ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿ. ಬಿ ವಾದಿರಾಜ್ ಭಟ್ ಅವರ 24 ನೇ ವರ್ಷದ ಪುಣ್ಯತಿಥಿಯ ಸ್ಮರರ್ಣಾರ್ಥ ಉಡುಪಿ ಪುತ್ತೂರು ಸುಬ್ರಹ್ಮಣ್ಯನಗರ ವಾರ್ಡಿನ ಕುದ್ಮಲ್ ರಂಗರಾವ್ ನಗರದ ದಲಿತ ಸಮುದಾಯದ 2 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸಲಾಯಿತು.
ನಗರದ ನಿವಾಸಿ ಇಂದಿರಾ ಮತ್ತು ಕುಮಾರಿ ರಶ್ಮಿ ಇವರ ಮನೆಗೆ ನೀಡಿದ ಉಚಿತ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಉಡುಪಿ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್  ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು,  ದೀನ ದಲಿತರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದರ ಮುಖೇನ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ಬಡವರ ಮನೆ ಬೆಳಗಿದೆ. ದಿವಂಗತರ ಸ್ಮರಣಾರ್ಥ ಈ ಮನೆಗಳಿಗೆ  ವಿದ್ಯುತ್ ಸಂಪರ್ಕ ನೀಡಿದ ಉಡುಪಿಯ ಇಂಜಿನಿಯರ್ ವಿಶ್ವನಾಥ ಭಟ್ ರ ಕುಟುಂಬದವರು ಅಭಿನಂದನಾರ್ಹರು. ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗಿದೆ ಎಂದು ಹೇಳಿದರು.

ದಿ.ಬಿ ವಾದಿರಾಜ್ ಭಟ್ ಅವರ ಪತ್ನಿ ಬಿ ವರದಾ ಭಟ್ ಕೊಡವೂರು ಈ ಎರಡು ಮನೆಗಳ ವಿದ್ಯುತ್ ಸಂಪರ್ಕದ ವೆಚ್ಚವನ್ನು ನೀಡಿದ್ದಾರೆ. ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಪ.ವಸಂತ ಭಟ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಸುಬ್ರಹ್ಮಣ್ಯ ನಗರ ವಾರ್ಡಿನ ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ನಗರಸಭಾ ಸದಸ್ಯೆ ಸುಬೇದ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಮಂಜುನಾಥ್ ಹೆಬ್ಬಾರ್, ಸ್ಥಳೀಯರಾದ ಯತೀಶ್ ಶೆಣೈ, ಜಯಂತ್, ಸತೀಶ್ ಪೂಜಾರಿ, ಲಕ್ಷ್ಮಿ, ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ರಾಘವೇಂದ್ರ ಕಿಣಿ, ರಾಕೇಶ್ ಜೋಗಿ, ಈ ಮನೆಯ ವಿದ್ಯುತ್ ಸಂಪರ್ಕ ಜೋಡಣೆ ವ್ಯವಸ್ಥೆಯನ್ನು ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್  ಕಡಿಯಾಳಿಯ  ಅಶ್ವಥ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!