ಮೋದಿ ಸರ್ಕಾರ ಜನರ ಜೇಬನ್ನು ಖಾಲಿ ಮಾಡಿ ತಮ್ಮ ಸ್ನೇಹಿತರ ಜೇಜು ತುಂಬಿಸುತ್ತಿದ್ದಾರೆ: ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜನರ ಜೇಬನ್ನು ಖಾಲಿ ಮಾಡಿ ತಮ್ಮ ಸ್ನೇಹಿತರ ಜೇಜು ತುಂಬಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ರಾಹುಲ್ ಗಾಂಧಿ ಹೇಳಿದ್ದಾರೆ.
ತೈಲ ಬೆಲೆ ಏರಿಕೆ ಕುರಿತಂತೆ ತೈಲ ಬೆಲೆಯಲ್ಲಿ ಬಿಜೆಪಿಯ ದರೋಡೆ ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟ್ ಮಾಡಿರುವ ಅವರು, ಪೆಟ್ರೋಲ್ ಬಂಕ್‍ಗಳಲ್ಲಿ ನಿಮ್ಮ ವಾಹನಗಳಿಗೆ ಪೆಟ್ರೋಲ್ ,ಡೀಸೆಲ್ ತುಂಬಿಸುವಾಗ ನಿಮ್ಮ ಗಮನ ದರದ ಮೀಟರ್ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದರ ಕಡೆ ಚಲಿಸಿದಾಗ, ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ ಬದಲಾಗಿ ಇಳಿಕೆಯಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಪೆಟ್ರೋಲ್ ಲೀಟರ್ ಗೆ 100ರೂ. ದಾಟಿದೆ, ನಿಮ್ಮ ಜೇಬಬನ್ನು ಖಾಲಿ ಮಾಡಿ ಮಂತ್ರಿಗಳಿಗೆ ನೀಡುವ ಮಹಾನ್ ಕಾರ್ಯ ಮೋದಿ ಸರಕಾರ ಉಚಿತವಾಗಿ ನಡೆಸುತ್ತಿದೆ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಇದೀಗ ಈ ಟ್ವಿಟ್ ಗೆ ಬೆಂಬಲವಾಗಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ರೀ ಟ್ವಿಟ್ ಮಾಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.