ಹೆಚ್ಚಿಸಿದ ಇಂಧನ ತೆರಿಗೆಯನ್ನು ಮೋದಿ ಟ್ಯಾಕ್ಸ್ ಎಂದ ಕಾಂಗ್ರೆಸ್ ವಕ್ತಾರ ಪವನ್ ಕೇರಾ

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಇಂಧನದ ಮೇಲಿನ ತೆರಿಗೆಯನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಪವನ್ ಕೇರಾ ಅವರು,  ಹೆಚ್ಚುತ್ತಿರುವ ಇಂಧನಗಳ ಮೇಲಿನ ತೆರಿಗೆಯನ್ನು ಮೋದಿ ಟ್ಯಾಕ್ಸ್ ಎಂದು ಟೀಕಿಸಿದರು. ಅಲ್ಲದೆ ಕೇಂದ್ರ ಸರ್ಕಾರವು ಕಳೆದ ಆರು ವರ್ಷ ಮತ್ತು ಎಂಟು ತಿಂಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿ ಜನರಿಂದ 20 ಸಾವಿರ ಕೋಟಿ ರೂ. ಲೂಟಿ ಮಾಡಿದೆ ಎಂದು ದೂರಿದರು.

ಇದೇ ವೇಳೆ, ಕಳೆದ ಆರು ವರ್ಷಗಳಿಂದ ಹೆಚ್ಚುವರಿ ಹೊರೆಯಾಗಿ ಇಂಧನದ ಮೇಲೆ ಮೋದಿ ಟ್ಯಾಕ್ಸ್ ವಿಧಿಸಲಾಗುತ್ತಿದೆ ಎಂದ ಅವರು, ಇದರಿಂದಾಗಿ ಗ್ರಾಹಕನ ಮೇಲೆ ಪ್ರತಿ ಲೀಟರ್ ಪೆಟ್ರೋಲ್ ಗೆ 23.78 ಲೀಟರ್ ಹಾಗೂ ಡಿಸೇಲ್ ಗೆ 28.37 ರು ಹೆಚ್ಚುವರಿ ಹೊರೆಯಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!