ಇಡೀ ಕೃಷಿ ವ್ಯವಹಾರವನ್ನು ತನ್ನಿಬ್ಬರು ಸ್ನೇಹಿತರಿಗೆ ಕೊಡಲು ಪ್ರಧಾನಿ ಹುನ್ನಾರ: ರಾಹುಲ್ ಗಾಂಧಿ ಆರೋಪ
ರಾಜಸ್ಥಾನ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಜಸ್ಥಾನಿ ಪೇಟ ತೊಟ್ಟು, ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. ರಾಜಸ್ತಾನ್ ನ ರುಪಂಗಢದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸ್ಥಳಕ್ಕೆ ತಾವೇ ಸ್ವತ: ಟ್ರ್ಯಾಕ್ಟರ್ ಚಲಾಯಿಸಿಕೊಂಡೇ ರಾಹುಲ್ ಗಾಂಧಿ ತೆರಳಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ , ರಾಜ್ಯಸ್ತಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೊಸ್ತ್ರಾ ರಾಹುಲ್ ಗಾಂಧಿ ಅಕ್ಕಪಕ್ಕ ಕುಳಿತಿದರು. ಎಐಸಿಸಿ ಜನರಲ್ ಕಾರ್ಯದರ್ಶಿ ಅಜಯ್ ಮಾಕೆನ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತಿತರರು ರಾಹುಲ್ ಗಾಂಧಿ ಜೊತೆಯಲ್ಲಿದ್ದರು.
ನಂತರ ರೈತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇಡೀ ಕೃಷಿ ವ್ಯವಹಾರವನ್ನು ತನ್ನಿಬ್ಬರು ಸ್ನೇಹಿತರಿಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಶೇ.40 ರಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ರೈತರು, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು, ವ್ಯಾಪಾರಿಗಳು, ಕಾರ್ಮಿಕರು ಸೇರಿದ್ದಾರೆ. ತನ್ನ ಇಬ್ಬರು ಸ್ನೇಹಿತರಿಗೆ ಕೃಷಿ ವ್ಯವಹಾರವನ್ನು ನೀಡಲು ಪ್ರಧಾನಿ ಮೋದಿ ಬಯಸಿದ್ದಾರೆ. ಕೃಷಿ ಕಾನೂನುಗಳು ಉದ್ದೇಶವೇ ಇದಾಗಿದೆ ಎಂದರು.
ಆಯ್ಕೆಗಳನ್ನು ನೀಡಿರುವುದಾಗಿ ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಹಸಿವು, ನಿರುದ್ಯೋಗ ಮತ್ತು ಆತ್ಮಹತ್ಯೆ ಆ ಆಯ್ಕೆಗಳಾಗಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.