ಸ್ಪೈಸ್‌ಜೆಟ್: 24 ಹೊಸ ವಿಮಾನ ಸಂಚಾರ ಪ್ರಾರಂಭ
ನವದೆಹಲಿ: ಅಹಮದಾಬಾದ್ ಮತ್ತು ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಫ್ರೆಬುವರಿಯಲ್ಲಿ 24 ಹೊಸ ವಿಮಾನ ಸಂಚಾರ ಪ್ರಾರಂಭಿಸುವುದಾಗಿ ಸ್ಪೈಸ್‌ಜೆಟ್ ಗುರುವಾರ ಹೇಳಿದೆ. ‘ಆಜ್ಮೀರ್–ಮುಂಬೈ ಮತ್ತು ಅಹಮದಾಬಾದ್–ಅಮೃತ್‌ಸರ ಮಾರ್ಗಗಳಿಗೆ ವಿಮಾನ ಸೇವೆ ಆರಂಭಿಸಲಿರುವ ಏಕೈಕ ವಿಮಾನಯಾನ ಸಂಸ್ಥೆಯಾಗಿದೆ’ ಎಂದು ಸ್ಪೈಸ್‌ಜೆಟ್ ಮಾಹಿತಿ ನೀಡಿದೆ. ‘ಭಾರತದ ಗೋಲ್ಡನ್ ಸಿಟಿ’ ಎಂದು ಪ್ರಸಿದ್ಧಿ ಪಡೆದಿರುವ ಜೈಸಲ್ಮೇರ್‌ಗೆ ಹಾಗೂ ದೆಹಲಿ ಮತ್ತು ಅಹಮದಾಬಾದ್‌ಗೆ ವಿಮಾನ ಸೇವೆಗಳನ್ನು ಆರಂಭಿಸಲಿದ್ದೇವೆ. ಅಹಮದಾಬಾದ್– ಬೆಂಗಳೂರು, ಕೋಲ್ಕತ್ತ–ಗುವಾಹಟಿ ಮತ್ತು ಗುವಾಹಟಿ–ದೆಹಲಿ ಮಾರ್ಗಕ್ಕೆ ದೈನಂದಿನ ವಿಮಾನ ಸೇವೆ ಇರಲಿದೆ’ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ‘ಅಹಮದಾಬಾದ್–ಬಾಗಡೋಗ್ರಾ–ಅಹಮದಾಬಾದ್ ಮತ್ತು ಚೆನ್ನೈ–ಕೋಲ್ಕತ್ತ–ಚೆನ್ನೈ ನಡುವಿನ ವಿಮಾನಗಳು ವಾರದಲ್ಲಿ ಮೂರು ದಿನ ಸಂಚರಿಸಲಿವೆ. ಪಟ್ನಾ–ಬೆಂಗಳೂರು ವಿಮಾನವು ವಾರದಲ್ಲಿ ಐದು ದಿನ ಮತ್ತು ಪಟ್ನಾ–ಸೂರತ್ ಮಾರ್ಗದಲ್ಲಿ ವಿಮಾನಗಳು ವಾರದಲ್ಲಿ ಎರಡು ದಿನ ಸಂಚರಿಸಲಿವೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ‘ಅಲ್ಲದೆ ಸೂರತ್‌ನಿಂದ ಚೆನ್ನೈ ಮಾರ್ಗಕ್ಕೆ ವಿಮಾನಗಳು ವಾರದಲ್ಲಿ ನಾಲ್ಕು ದಿನ ಸಂಚರಿಸಲಿವೆ’ ಎಂದು ಪ್ರಕಟಣೆ ಹೇಳಿದೆ. |