ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ದಾರ ಕಚೇರಿ ಉದ್ಘಾಟನೆ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನೂತನ ಜೀರ್ಣೋದ್ದಾರ ಕಚೇರಿ ಉದ್ಘಾಟನಾ ಕಾರ್ಯಕ್ರಮ ಫೆ.12 ರಂದು ನಡೆಯಿತು. ನೂತನ ಕಚೇರಿಯನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ನೆರವೇರಿಸಿ ಆಶೀರ್ವಚನ ನೀಡಿದರು.

ಈ ವೇಳೆ, ಕಚೇರಿಯ ಗಣಕಯಂತ್ರವನ್ನು, ಸಾಮಾಜಿಕ ಜಾಲತಾಣದ ಫೇಸ್ಬುಕ್ ಪೇಜ್‍ನ್ನು ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂತನ ಕಚೇರಿಗೆ ಅವಕಾಶ ಮಾಡಿಕೊಟ್ಟ ಶಕುಂತಳಾ ಉಪಾಧ್ಯ ಕಡಿಯಾಳಿ ಇವರನ್ನು ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ವಿಠೋಭ ಮಹಿಳಾ ಭಜನಾ ಮಂಡಳಿ ಅಂಬಲಪಾಡಿ ಇವರಿಂದ ಕುಣಿತ ಭಜನೆ ನಡೆಯಿತು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಕಡಿಯಾಳಿ ನಗರಸಭಾ ಸದಸ್ಯೆ ಗೀತಾ ಶೇಟ್, ದಕ್ಷಿಣ ಕನ್ನಡ ಉಡುಪಿ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,  ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ರವಿರಾಜ ವಿ ಆಚಾರ್ಯ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ .ರಾಘವೇಂದ್ರ ಕಿಣಿ, ಸತೀಶ್ ಕುಲಾಲ್ ಕಡಿಯಾಳಿ ಮೊದಲಾದವರು ಉಪಸ್ಥಿತರಿದ್ದರು.

ಭಕ್ತರಿಗೆ ಜೀರ್ಣೋದ್ದಾರ ನಿಧಿ ಕಾಣಿಕೆ ಡಬ್ಬಿ ವಿತರಣೆ:  ದೇವಳದ ತೀರ್ಥ ಮಂಟಪದಲ್ಲಿ  ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ತಮ್ಮ ಅನುಗ್ರಹ ಸಂದೇಶದಲ್ಲಿ , ಶ್ರೀ ಕೃಷ್ಣ ದೇವರು ಶ್ರೀ ಮಹಿಷಮರ್ದಿನಿ ಅಣ್ಣ ತಂಗಿ ಬಾಂಧವ್ಯ ಹೊಂದಿದ್ದು, ತಾಯಿಯ ಅನುಗ್ರಹ ಎಲ್ಲರಿಗೂ ಬೇಕು. ಪ್ರತಿಯೊಬ್ಬರೂ ಈ ಪುಣ್ಣ್ಯಾ ಕಾರ್ಯದಲ್ಲಿ ಭಾಗಿಯಾಗಿ ಅತೀ ಶೀಘ್ರ ದೇವಳ ಪೂರ್ಣಗೊಳ್ಳಲಿ  ಶುಭ ಹಾರೈಸಿದರು. ಸ್ವತಃ ಶ್ರೀಪಾದರು ಮೊದಲ ಕಾಣಿಕೆ ಡಬ್ಬಿ ಪಡೆದು ಬಳಿಕ ತಿರುಪತಿಯ ಶ್ರೀನಿವಾಸ ದೇವರ ಲಡ್ಡು ಪ್ರಸಾದ ನೀಡಿ ಅನುಗ್ರಹಿಸಿದರು. 

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ರವಿರಾಜ ವಿ ಆಚಾರ್ಯ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಗಣೇಶ್ ರಾವ್  ಹಾಗು  ನೂರಾರು  ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು .

Leave a Reply

Your email address will not be published. Required fields are marked *

error: Content is protected !!